suddibindu.in
ಕಾರವಾರ : ಶಿರೂರು ಗುಡ್ಡಕುಸಿತ ಉಂಟಾಗಿ ಹನ್ನೊಂದು ಮಂದಿ ಸಾವನ್ನಪ್ಪಿದ್ದು, ಜಗನ್ನಾಥ ನಾಯ್ಕ ಸೇರಿ ಮೂವರ ಕಣ್ಮರೆಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಬಳಿಕ ಅವರ ಕುಟುಂಬದ ಓರ್ವರಿಗೆ ಉದ್ಯೋಗ ಕೊಡುವುದಾಗಿ ಜಿಲ್ಲಾ ಉಸ್ತುವರಿ ಸಚಿವ ಮಂಕಾಳು ವೈದ್ಯ ಅವರು ಅಂದು ಭರವಸೆಯನ್ನ ನೀಡಿದ್ದರು. ಅದರಂತೆ ಇಂದು ಉದ್ಯೋಗ ಬಗ್ಗೆ ಆದೇಶ ಪತ್ರ ನೀಡುವ ಮೂಲಕ ಸಚಿವರು ನುಡಿದಂತೆ ನುಡಿದಂತೆ ನಡೆದಿದ್ದಾರೆ.
ಇಂದು ಹೊನ್ನಾವರದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ ಲಕ್ಷ್ಮಿ ಪ್ರೀಯ ಅವರ ಮೂಲಕ ಉದ್ಯೋಗದ ಆದೇಶ ಪತ್ರ ಕೊಟ್ಟಿದ್ದಾರೆ. ಜಗನ್ನಾಥ ಮಗಳಾಗಿರುವ ಪಲ್ಲವಿಗೆ ಇದೀಗ ಪ್ರವಾಸೋದ್ಯಮ ಇಲಾಖೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗ ನೀಡಲಾಗಿದೆ.
ಇನ್ನೂ ಕಣ್ಮರೆಯಾದ ಜಗನ್ನಾಥ ನಾಯ್,ಲೋಕೇಶ ನಾಯ್ಕ ಹಾಗೂ ಕೆರಳದ ಅರ್ಜುನ್ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಅವರಿಗೆ ಸರಕಾರದ ಸುತ್ತೋಲೆಯಂತೆ ಪರಿಹಾರ ನೀಡಲು ಒಂದಿಷ್ಟು ಸಮಸ್ಯೆಗಳು ಉಂಟಾಗಿತ್ತು. ಆದರೆ ಅದೇನೆ ಇದ್ದರೂ ಸಹ ಸರಕಾರದಿಂದ ಏನು ಸಿಗಬೇಕಾದ ಪರಿಹಾರ ನೀಡಬೇಕೋ ಅದನ್ನ ಕೆಲ ದಿನದಲ್ಲಿ ನೀಡುವುದಾಗಿ ಸಹ ಭರವಸೆ ನೀಡಿದ ಸಚಿವರ ಸರಕಾರ ನಿಮ್ಮ ಜೊತೆ ಇದೆ ಎನ್ನುವ ಬಗ್ಗೆ ಭರವಸೆ ನೀಡಿದ್ದಾರೆ. ಈ ಮೂಲಕ ಸರಕಾರ ಹಾಗೂ ಸಚಿವರು ಸಂಕಷ್ಟದಲ್ಲಿರುವವರ ನೆರವಿಗೆ ನಿಂತಿರುವಂತಾಗಿದೆ..
ಇದನ್ನೂ ಓದಿ