suddibindu.in
ಬಳ್ಳಾರಿ: ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಪೊಟೋ ಹಾಗೂ ಮೆಸೇಜ್ ಕಳುಹಿಸಿದ ಎಂಬ ಕಾರಣಕ್ಕೆ ಓರ್ವ ಮಹಿಳೆಗಾಗಿ ಓರ್ವನ ಜೀವ ತೆಗೆದು ಜೈಲು ಸೇರಿರುವ ನಟ ದರ್ಶನಗೆ ಇದೀಗ ಇನ್ಬೋರ್ವ ಮಹಿಳೆ ಗಂಟುಬಿದ್ದಿರುವಂತಿದೆ. ಈ‌ ನಡುವೆ ಬಳ್ಳಾರಿ ಜೈಲ್‌ನ ಮುಂದೆ ಮಹಿಳೆಯೊಬ್ಬರು ದರ್ಶನ್ ಭೇಟಿ ಮಾಡಲೇಬೇಕು.‌ಅವರನ್ನ ಮದುವೆ ‌ಆಗೋದಕ್ಕೆ ಬಂದಿರೋದಾಗಿ ಮಹಿಳೆ‌ ರಂಪಾಟ‌ ಮಾಡಿದ್ದಾಳೆ..

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ ಒಳಗಡೆ ಒಂಟಿಯಾಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ತನಿಖೆಯನ್ನು ಪೂರ್ಣಗೊಳಿಸಿರುವ ಪೊಲೀಸರು ಚಾರ್ಜ್‌ಶೀಟ್ ಅನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಈಗ ದರ್ಶನ್ ಜಾಮೀನು ಪಡೆದು ಹೊರಗೆ ಬರುವ ಕಡೆಗೆ ಗಮನ ಹರಿಸಿದ್ದಾರೆ.

ಆದರೆ ಅಭಿಮಾನಿಗಳನ್ನು ಜೈಲಿನ ಒಳಗೆ ಭೇಟಿ ಮಾಡುವುದಕ್ಕೆ ಅವಕಾಶ ಇಲ್ಲದೇ ಇರುವುದರಿಂದ ಮಹಿಳೆ ಹಠ ಹಿಡಿದು ಕೂತಿದ್ದಳು. ಸದ್ಯಕ್ಕೆ ರಕ್ತ ಸಂಬಂಧಿ ಹಾಗೂ ವಕೀಲರಿಗೆ ಮಾತ್ರ ಅವಕಾಶವನ್ನು ನೀಡುತ್ತಿದ್ದು, ಬೇರೆಯವರು ದರ್ಶನ್‌ ಅವರನ್ನು ಭೇಟಿ ಮಾಡುವುದಕ್ಕೆ ನಿರ್ಬಂಧ ಹೇರಿದ್ದಾರೆ.

ಇದನ್ನೂ ಓದಿ