ಸುದ್ದಿಬಿಂದು ಬ್ಯೂರೋ
ಕಾರವಾರ
: ಆತ್ಮ ಹತ್ಯೆಗೆ ಯತ್ನಿಸಿದ ಭಗ್ನ ಪ್ರೇಮಿ ಓರ್ವನಿಗೆ ರಕ್ಷಣೆ ಮಾಡಿರುವ ಘಟನೆ ರವೀಂದ್ರನಾಥ ಕಡಲತೀರದ ಅರಬ್ಬಿ ಸಮುದ್ರದಲ್ಲಿ ನಡೆದಿದೆ.

ಮುಫ್ಲಾ ಮಂಡಲ್ ಎಂಬಾತನೆ ಆತ್ಮಹತ್ಯೆಗೆ ಯತ್ನಿಸಿದ ಭಗ್ನ ಪ್ರೇಮಿಯಾಗಿದ್ದು, ಈತ ವೆಸ್ಟ್ ಬೆಂಗಾಳದಿಂದ ಕಾರವಾರದ ವೈದ್ಯಕೀಯ ಕಾಲೇಜಿನ ಎರಡನೆ ಹಂತದ ಕಟ್ಟಡ ಕಾಮಗಾರಿ ಕೆಲಸಕ್ಕೆ ಬಂದಿದ್ದ,

ತಾನು ಪ್ರೀತಿಸಿದ ಹುಡುಗಿ ಬೇರೆಯವರ ಜತೆ ಮದುವೆ ಆಗಿದೆ ಎನ್ನುವ ಕಾರಣಕ್ಕೆ ಮುಫ್ಲಾ ಮಂಡಲ್ ಆತ್ಮಹತ್ಯೆಗೆ ಯತ್ನಿಸಿದ್ದ, ಈತ ಸಮುದ್ರದಲ್ಲಿ ಹಾರಿಸುವುದನ್ನ ಗಮನಿಸಿದ ಕಡಲತೀರದಲ್ಲಿದ್ದ ಲೈಪ್ ಗಾರ್ಡ್ ಮತ್ತು ಪ್ರವಾಸಿ ಮಿತ್ರ ಸಿಬ್ಬಂದಿ ಆತನ ರಕ್ಷಣೆ‌ ಮಾಡಿದ್ದಾರೆ. ಈ ಬಗ್ಗೆ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.