ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: (Heavy rain in Uttara Kannada) ವಾಯುಭಾರ ಕುಸಿತ ಹಿನ್ನಲೆಯಲ್ಲಿ ನಿನ್ನೆಯಿಂದ ಜಿಲ್ಲಾದ್ಯಂತ ವರುಣನ ಆರ್ಭಟ ಆರಂಭವಾಗಿದ್ದು,ಇಂದು ಕೂಡ ಮಳೆ ಅಬ್ಬರ ಜೋರಾಗಿದ್ದು,(Heavy rain warning) ಕರಾವಳಿಯಲ್ಲಿ ಇನ್ನೇರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಉತ್ತರ ಕನ್ನಡ ಜಿಲ್ಲಾದ್ಯಂತ ನಿನ್ನೆ ಸಂಜೆಯಿಂದ ಸುರಿದ ವರುಣನ ಆರ್ಭಟಕ್ಕೆ ಸಾಕಷ್ಟು ಕಡೆ ಅವಾಂತರ ಉಂಟಾಗುತ್ತಿದೆ. ಚಥುಷ್ಪತ ರಾಷ್ಟೀಯ ಹೆದ್ದಾರಿ,66ರ ಕಾಮಗಾರಿಯಿಂದಾಗಿ ಅಂಕೋಲಾ ತಾಲೂಕಿನ ಹಾರವಾಡ ಬಳಿ ಕುಮಟಾದಿಂದ ಕಾರವಾರ ಕಡೆ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಅಪಘಾತಕ್ಕೆ ಒಳಗಾಗಿದೆ. ಇನ್ನೂ ಮಳೆಯ ಪರಿಣಾಮ ಹೆದ್ದಾರಿ ಬದಿಯಲ್ಲಿ ರಾಶಿ ಹಾಕಲಾಗಿದ್ದ ಮಣ್ಣು ಭಾರೀ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿ ತಗ್ಗು ಪ್ರದೇಶದಲ್ಲಿರುವ ಮನೆ,ತೋಟಗಳಿಗೆ ನುಗ್ಗಿದ್ದು ಜನಜೀವನ ಅಸ್ತವ್ಯಸ್ಥಗೊಳ್ಳುವಂತಾಗಿದೆ.

ಇನ್ನೂ ಕುಮಟಾ ತಾಲೂಕಿನ ವಾಗ್ಗಳ್ಳಿ ಬಳಿ ಕುಮಟಾ-ಸಿದ್ದಾಪುರ ಹೆದ್ದಾರಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಗಿದ್ದು,ಕೆಲ ಸಮಯ ವಾಹನ ಸಂಚಾರ ಬಂದ್ ಆಗಿತ್ತು.ಶಿರಸಿ ಮುಂಡಗೋಡ ರಸ್ತೆಯಲ್ಲಿಯೂ ಸಹ ವಾಹನ ಸಂಚಾರದಲ್ಲಿಯೂ ವ್ಯತ್ಯಯ ಉಂಟಾಗಿತ್ತು. ಶಿರಸಿಯಲ್ಲಿ ಹಣ್ಣಿನ ಅಂಗಡಿಯೊಂದರ ಮೇಲೆ ಮರ ಬಿದ್ದು ಹಾನಿ ಉಂಟಾಗಿದೆ. ಮುಂಡಗೋಡ ತಾಲೂಕಿನ ಬಾಚಣಕಿ ಬಳಿ ರಸ್ತೆಯಲ್ಲಿ ಬೃಹತ್ ಮರ ಬಿದ್ದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿತ್ತು.

ಮೂರು ಗಂಟೆಯಲ್ಲಿ ಭಾರೀ ಮಳೆ
ಈಗಾಗಲೇ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಸುರಿದ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಉಂಟಾಗಿದ್ದು, ಉತ್ತರ ಕನ್ನಡ ಜಿಲ್ಲೆ ಜೊತೆಗೆ ಇನ್ನೊಂದಿಷ್ಟು ಜಿಲ್ಲೆಗಳಲ್ಲಿ ಮೂರು ಗಂಟೆಯಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.

ಹೆದ್ದಾರಿಯಲ್ಲಿ ಸಂಚಾರ ಆತಂಕ
ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದಾಗಿ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡಕುಸಿತ ಉಂಟಾಗಿ ಹತ್ತಕ್ಕೂ ಹೆಚ್ಚು ಜನ ಮೃತಪಟ್ಟಿದ್ದು,ಇದೀಗ ಮತ್ತೆ ಮಳೆ ಆರಂಭವಾಗಿದ್ದು,ವಾಹನ ಸವಾರರು ಆತಂಕದಲ್ಲೆ ಹೆದ್ದಾರಿಯಲ್ಲಿ ಸಂಚರಿಸಬೇಕಾಗಿದೆ. ಈಗಾಗಲೇ ಮಳೆಗಾಲ ಪೂರ್ವದಲ್ಲೆ ಭಾರೀ ಮಳೆ ಸುರಿಯುತ್ತಿದೆ. ಐಆರ್‌ಬಿ ಕಂಪನಿ ನಡೆಸಿದ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ಕರಾವಳಿ ಉದ್ದಕ್ಕೂ ಹೆದ್ದಾರಿ ಪಕ್ಕದಲ್ಲಿನ ಗುಡ್ಡಗಳು ದೊಡ್ಡ ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಂಡಿದ್ದು,‌ಮಳೆ ಇದೆ ರೀತಿ ಮುಂದುವರೆದಲ್ಲಿ ಅನಾಹುತ ಉಂಟಾಗುವ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ.ಈಗಾಗಲೇ ಸಾಕಷ್ಟು ಕಡೆಯಲ್ಲಿ ಗುಡ್ಡ ಕುಸಿತ ಉಂಟಾಗಲಿದೆ ಎಂದು ಈಗಾಗಲೇ ತಜ್ಞನರು ವರದಿ ಸಹ ನೀಡಿದ್ದಾರೆ.

ಇದನ್ನೂ ಓದಿ