ಸುದ್ದಿಬಿಂದು ಬ್ಯೂರೋ
ಕಾರವಾರ : ಕಾಂಗ್ರೆಸ್ ‌ನ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯ ಪ್ರದಾನ ಕಾರ್ಯದರ್ಶಿಯಾಗಿದ್ದ ಅಳ್ವೆಕೋಡಿಯ ಗಜು ನಾಯ್ಕ ಮಹಿಳೆ ಓರ್ವಳ ಜೊತೆ ಸೇರಿಕೊಂಡು ಅಮಾಯಕ ಯುವಕನೋರ್ವ‌ನಿಗೆ ಚಪ್ಪಲಿಯಲ್ಲಿ ಹೊಡೆದು ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಗಜು ನಾಯ್ಕ ಅವರನ್ನ ಎಲ್ಲಾ ಹುದ್ದೆಗಳಿಂದ ಮುಂದಿನ ಆದೇಶದವರೆಗೆ ಅಮಾನತ್ತಿನಲ್ಲಿಡುವಂತೆ ಆದೇಶ ಮಾಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಳ್ವೆಕೋಡಿಯ ಹುಂಡೈ ಶೋರೂಂನಲ್ಲಿ ಅಮಾಯಕ ಯುವಕನಿಗೆ ಕಾಂಗ್ರೆಸ್ ಮುಖಂಡ ಗಜು ನಾಯ್ಕ ಮಹಿಳೆಯೊಂದಿಗೆ ಶಾಮೀಲಾಗಿ ಬಡ ಯುವಕನಿಗೆ ಥಳಿಸಿದ್ದರು.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದು ಜಿಲ್ಲಾ ಕಾಂಗ್ರೆಸ್ ನಾಯಕರಿಗಷ್ಟೆ ಅಲ್ಲದೆ ರಾಜ್ಯ ನಾಯಕರು ಇವರ ಕೃತ್ಯದಿಂದ ಮುಜುಗರಕ್ಕೆ ಒಳಗಾಗಿದ್ದರು.

ಘಟನೆ ನಂತರದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಗಜು ನಾಯ್ಕ ಅವರಿಗೆ ತಕ್ಷಣದಿಂದ ಹುದ್ದೆಯಿಂದ ಕೆಳಗೆ ಇಳಿಸುವಂತೆ ಪತ್ರ ಸಹ ಬರೆದಿದ್ದರು. ಕಾಂಗ್ರೆಸ್ ಹೈ ಕಮಾಂಡಗೆ ಈ ವಿಚಾರವಾಗಿ ಪತ್ರ ಬರೆದಿರುವ ಬಗ್ಗೆ ಸುದ್ದಿ ಬಿಂದು ಕಳೆದ ನಾಲ್ಕೈದು ದಿನಗಳ ಹಿಂದೆ ವರದಿ ಪ್ರಕಟಿಸಿತ್ತು.

ಈ ಕುರಿತು ಹಲ್ಲೆಗೊಳಗಾದ ಕೃಷ್ಣ ಕುಟುಂಬ ಗಜು ನಾಯ್ಕ ಸೇರಿ ನಾಲ್ವರ ವಿರುದ್ಧ ಎಫ್ ಐಆರ್ ಕೂಡ ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಇದೀಗ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಗಜು ನಾಯ್ಕ ಅಳ್ವೆಕೋಡಿ ಅವರನ್ನ ಪಕ್ಷದ ಹುದ್ದೆಯಿಂದ ಅಮಾನತು ಮಾಡಿದೆ.