ಸುದ್ದಿಬಿಂದು ಬ್ಯೂರೋ
ಕಾರವಾರ : ಆಟೋ ರಿಕ್ಷಾ ಚಾಲಕ ಮತ್ತು ಮಾಲಕರಿಗೆ ಶಿರಸಿಯ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಮವಸ್ತ್ರ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವನ್ನ ಉತ್ತರಕನ್ನಡ ಜಿಲ್ಲೆಯ ಕಾರವಾರದ ನಗರದ ಅಜ್ವೀ ಓಶಿಯನ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನ ಉದ್ಯಮಿ ಜಾರ್ಜ್ ಫರ್ನಾಂಡೀಸ್ ಹಾಗೂ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಅನಂತಮೂರ್ತಿ ಹೆಗಡೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಕಾರ್ಯಕ್ರಮದಲ್ಲಿ 10ಕ್ಕೂ ಅಧಿಕ ಹಿರಿಯ ಆಟೋ ಚಾಲಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ನೂರಾರು ಆಟೋ ಚಾಲಕರಿಗೆ ಸಮವಸ್ತ್ರವನ್ನ ವಿತರಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅನಂತಮೂರ್ತಿ ಹೆಗಡೆ ಆಟೋ ರಿಕ್ಷಾ ಚಾಲಕರು ಸ್ವಾಭಿಮಾನಿಗಳು. ಅವರು ಯಾರ ಹಂಗಿನಲ್ಲಿಯೂ ಬದುಕಲು ಇಚ್ಚಿಸುವವರಲ್ಲ. ಅವರಲ್ಲಿ ಪ್ರಾಮಾಣಿಕತೆ ಎನ್ನುವುದಿದೆ. ರಸ್ತೆಯಲ್ಲಿ ಯಾರಿಗೆ ಅಪಘಾತವಾದರೂ ಪೊಲೀಸರಿಗಿಂತ ಮೊದಲು ರಿಕ್ಷಾ ಚಾಲಕರು ಬಂದು ಸಹಾಯ ಮಾಡುತ್ತಾರೆ. ಇಂದು ಅವರ ಏಳಿಗೆ ಸಹಾಯ ಮಾಡುತ್ತಿರುವುದು ನನಗೆ ಖುಷಿ ತಂದಿದೆ ಎಂದರು.

ಒಬ್ಬರ ಭಾವನೆ ಅರಿತು ಸಹಾಯ ಮಾಡುತ್ತಿದ್ದೇನೆ. ರಾಜಕೀಯಕ್ಕೆ ಬರಬೇಕು ಎಂದು ಜನ ಇಚ್ಚಿಸಿದರೇ ಮುಂದೆ ಕಾಲ ಒದಗಿ ಬಂದಾಗ ನಿರ್ಣಯ ಮಾಡೋಣ. ಪ್ರತಿಯೊಬ್ಬರ ರಿಕ್ಷಾ ಚಾಲಕರಿಗೆ ಇನ್ಸೂರೆನ್ಸ್ ಮಾಡಿಸಬೇಕು ಎನ್ನುವ ಹಂಬಲ‌ ಇದೆ. ಇದರ ಜೊತೆ ಜೊತೆಗೆ ರಿಕ್ಷಾ ಚಾಲಕರ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ತರಬೇತಿ ನೀಡುವ ಚಿಂತನೆ ಇದೆ ಎಂದರು.

ಸ್ಕೋಡ್ ವೇಸ್ ಸಂಸ್ಥೆಯ ನಿರ್ದೇಶಕ ವೆಂಕಟೇಶ ನಾಯ್ಕ ಅವರು ಮಾತನಾಡಿ ಅನಂತಮೂರ್ತಿ ಹೆಗಡೆ ಅವರಿಗೆ ಬಡವರ ಬಗ್ಗೆ ಅಪಾರವಾದ ಕಾಳಜಿ ಇದೆ. ಇದರೆ ಜೊತೆಗೆ ಅವರು ತಮ್ಮ ಲಾಭದ ಒಂದು ಭಾಗವನ್ನ ಬಡವರಿಗಾಗಿಯೇ ಧಾನ ಮಾಡುತ್ತಿದ್ದಾರೆ. ಅವರ ಜನರಪ ಕಾರ್ಯವನ್ನ ನಿಜಕ್ಕೂ ಪ್ರತಿಯೊಬ್ಬರು ಮೆಚ್ಚುವಂತಹದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರವಾಗಿರುವ ಕೆಲಸ ಮಾಡುವಂತಾವಲಿ ಎಂದರು.

ಕಾರ್ಯಕ್ರಮದಲ್ಲಿ ಭಟ್ಕಳ ತಾಲೂಕು ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ, ಹೊನ್ನಾವರದ ಶಿವರಾಜ ಮೇಸ್ತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ. ಉದ್ಯಮಿ ರಾಜೇಶ ಕಾಮತ್ ಹಾಗೂ ಕಾರವಾರದ ಆಟೋ ಚಾಲಕರು ಮತ್ತು ಮಾಲೀಕರು ಭಾಗಿಯಾಗಿದ್ದರು.

ಇದುವರಗೆ ಐದು ಸಾವಿರಕ್ಕೂ ಅಧಿಕ ಆಟೋ ಚಾಲಕರಿಗೆ ಸಮವಸ್ತ್ರ
ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ, ಭಟ್ಕಳ, ಮುಂಡಗೋಡು,ಯಲ್ಲಾಪುರ,ಕಾರ ಹಾಗೂ ಬೆಳಗಾವಿ ಜಿಲ್ಲೆಯ ಕಾನಾಪುರ ಭಾಗದ ಐದು ಸಾವಿರಕ್ಕೂ ಹೆಚ್ಚು ಅಟೋ ರಿಕ್ಷ ಚಾಲಕರು ಮಾಲೀಕರಿಗೆ ಉಚಿತ ಸಮವಸ್ತ್ರ ನೀಡುವ ಜೊತೆ ಆಟೋರಿಕ್ಷ ಪಾಸಿಂಗ್ ಯೋಜನೆ ಹಾಗೂ ಆಟೋರಿಕ್ಷ ಪ್ರಿಂಟಿಂಗ್ ಹುಡ್ ವಿತರಣೆ ನೆರವೇರಿಸಲಾಗಿದೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಅನಂತಮೂರ್ತಿ ಅವರಿಂದ ಪಾದಯಾತ್ರೆ
ಉತ್ತರಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲದೆ‌ ಇಂದು ನಮ್ಮ ಜಿಲ್ಲೆಯ ಜನರು ಮಣಿಪಾಲ, ಗೋವಾ, ಹುಬ್ಬಳ್ಳಿಗೆ ಹೋಗೇಕಾದ‌ ಸಮಸ್ಯೆ ಇದೆ. ಜಿಲ್ಲೆಯಲ್ಲಿ ಸೂಫರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೆ ಇರುವ ಕಾರಣ ಅದೆಷ್ಟೋ ಮಂದಿ ಬದುಕಬೇಕಾದವರು ದೂರದ ಆಸ್ಪತ್ರೆಗಳಿಗೆ ಹೋಗುವಾಗ ಮಾರ್ಗಮಧ್ಯದಲ್ಲಿ ಪ್ರಾಣ ಕಳೆದುಕೊಳ್ಳುವಂತಾಗಿದೆ.‌

ಅದೆ ನಮ್ಮ ಜಿಲ್ಲೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಇದಿದ್ದರೆ ಅನೇಕರು ಬುದುಕಿ ಉಳಿಯುತ್ತಿದ್ದರು.ಪರಿಸ್ಥಿತಿ ಹೀಗೆ ಇಂದರೆ ಮುಂದಿನ ದಿನದಲ್ಲಿ ನಮ್ಮ‌ಜಿಲ್ಲೆಯ ಜನರಿಗೆ ಅಪಾಯವಿದೆ. ಹೀಗಾಗಿ ಜಿಲ್ಲೆಗೆ ಎರೆಡು ವೈದ್ಯಕೀಯ ಕಾಲೇಜುಗಳು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನ ನೀಡಬೇಕು ಎನ್ನುವ ಕೋರಿಕೆ ನಮ್ಮದಾಗಿದೆ.

ನವೆಂಬರ್ 2ರಿಂದ ಶಿರಸಿಯಿಂದ‌ ಕಾರವಾರದವರೆಗೆ ಪಾದಯಾತ್ರೆಯನ್ನ ಹಮ್ಮಿಕೊಳ್ಳಲಾಗಿದೆ.ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ರೋಗಿಗಳು ಇಂದಿಗೂ ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನರ ಹಿತಕ್ಕಾಗಿ ನಮ್ಮ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದವಾಗಬೇಕಿರುವುದು ತೀರಾ ಅನಿವಾರ್ಯವಾಗಿದೆ.

ಪಾದಯಾತ್ರೆಯ ಮೂಲಕ ಜಿಲ್ಲೆಯ ಜನ ಆರೋಗ್ಯದ ವಿಚಾರವಾಗಿ ಎಷ್ಟೊಂದು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಎನ್ನುವ ಬಗ್ಗೆ ಈ ಪಾದಯಾತ್ರೆ ಮೂಲಕ ಸರಕಾರದ ಗಮನವನ್ನ ಸೆಳೆಯುವ ಕೆಲಸ ಮಾಡಲಾಗುವುದು. ಹೀಗಾಗಿ ಜಿಲ್ಲೆಯ ಸ್ವಾಭಿಮಾನಿ ಜನರು ಈ ಪಾದಯಾತ್ರೆಯಲ್ಲಿ ಒಂದಾಗಿ ಯಶಸ್ವಿ ಗೊಳಿಸಿ ಬೇಡಿಕೆ ನೆರವೇರಲು ಕಾರಣೀಕರ್ತರಾಗಲು ಕೈಜೋಡಿಸಿ ಭಾಗವಹಿಸಬೇಕು ಎಂದು ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟಿನ ಸಂಸ್ಥಾಪಕ ಅನಂತಮೂರ್ತಿ ಹೆಗಡೆ ಹೇಳಿದರು.