ಸುದ್ದಿಬಿಂದು ಬ್ಯೂರೋ ವರದಿ
Kumta : ಕುಮಟಾ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚಲಿಸುತ್ತಿದ್ದ ಸ್ಕೂಟಿ ಹಿಂಬದಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿರುವ ಘಟನೆ ಮಿರ್ಜಾನ ಬಳಿಯ ಕೋಡ್ಕಣಿ ಕ್ರಾಸ್‌ನಲ್ಲಿ ನಡೆದಿದೆ.
ವನಿತಾ ಪದ್ಮನಾಭ ಹೊಸಮನೆ, ಹರಿಕಾಂತ (31) ಮೃತ ಮಹಿಳೆಯಾಗಿದ್ದಾರೆ.ಈಕೆ ಬೆಟ್ಕಿಳಿ ಹತ್ತರಿದ ಮೊರಬಾ ನಿವಾಸಿ ಎಂದು ಗೊತ್ತಾಗಿದೆ. ಈಕೆ ತನ್ನ ಪತಿಯಾಗಿರುವ ಪದ್ಮನಾಭ ಹೊಸಮನೆ ಚಲಿಸುತ್ತಿದ್ದ ಸ್ಕೂಟಿಯಲ್ಲಿ ಕುಳಿತು ಬೆಟ್ಕುಳಿಕಡೆಯಿಂದ ಕುಮಟಾ ಕಡೆ ಚಲಿಸುತ್ತಿದ್ದರು. ಈ ವೇಳೆ ಅವರ ಹಿಂಬದಿಯಲ್ಲಿ ಅತೀ ವೇಗವಾಗಿ ಬಂದ Ka 20, Md-9786 ನೊಂದಣಿ ಹೊಂದಿರುವ ಥಾರ ಕಾರು ಸ್ಕೂಟಿ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಸ್ಕೂಟಿಯಲ್ಲಿದ್ದ ವನಿತಾಳ ತಲೆಗೆ ಗಾಯವಾಗಿತ್ತು.
ತಕ್ಷಣ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಗಂಭೀರವಾದ ಗಾಯವಾಗಿರುವ ಕಾರಣ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿತ್ತು.ಈ ವೇಳೆ ಆಸ್ಪತ್ರೆ ಹತ್ತಿರದಲ್ಲಿ ಇರುವಾಗಲೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಮನಿಸಿ