ಸುದ್ದಿಬಿಂದು ಬ್ಯೂರೋ
ಕಾರವಾರ : ಇನ್ನೇನು ಲೋಕಸಭಾ ಚುನಾವಣೆಗೆ (Lok Sabha Election)ಐದಾರು ತಿಂಗಳಷ್ಟೆ ಬಾಕಿ ಇದ್ದು, ಏಪ್ರಿಲ್ ಇಲ್ಲ‌ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಬಿಜೆಪಿ(BJP) ಹವಾ ಇದ್ದು, ಟಿಕೆಟ್‌ ಪೈಟ್ ಜೋರಾಗಿದೆ. ಇನ್ನೂ ಹಾಲಿ ಸಂಸದ, ಮಾಜಿ‌‌ ಕೇಂದ್ರ‌ ಸಚಿವ ಅನಂತಕುಮಾರ ಹೆಗಡೆ(MP Anantakumar Hegde,)ಈ ಬಾರಿ ನಿರಾಶಕ್ತಿ ತೋರಿರುವುರು ಚಾಲ್ತಿಯಲ್ಲಿದೆ. ಇದನ್ನೆ ಅಸ್ತ್ರವಾಗಿಸಿಕೊಂಡ ಕೆಲವರು ತಾ ಮುಂದೆ ನಾ ಮುಂದೆ ಎಂದು ಪ್ರಯತ್ನಿಸುವುದರಲ್ಲಿದ್ದಾರೆ. ಅವರ ಸಾಲಿನಲ್ಲಿ ಅನಂತ ಮೂರ್ತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡ(Ananthamurthy Hegde) ಹೆಸರು ಕೇಳಿ ಬರುತ್ತಿದೆ.

ಆದರೆ ಅನಂತಮೂರ್ತಿ ಹೆಗಡೆ ಹೆಸರು ಹೇಳಿದರೆ ಬಿಜೆಪಿಯ ಕಾರ್ಯಕರ್ತರೆ ಮೂಗು ಮುರಿಯುತ್ತಿದ್ದಾರೆ. ಅದೇನೆಂದರೆ ಅನಂತ ಮೂರ್ತಿ ಅವರು ನಿನ್ನೆ ಮೊನ್ನೆ ಚಾಲ್ತಿಗೆ ಬಂದವರು. ಅವರಿಗೆ ರಾಜಕೀಯದ ಗಂಧ ಗಾಳಿಯಿಲ್ಲ. ಯಾರೋ ಏರಿಸಿದ್ದಾರೆಂದು ಇವರು ಪಪ್ಪಾಯಿ ಮರ ಏರಿ ಕುಂತು ಅಲ್ಲಿಂದಲೇ, ಬಿಜೆಪಿ ಟಿಕೆಟ್ ತನ್ನಗೆ ಎಂದು ಬಾವುಟ ಹಾರಿಸುತ್ತಿದ್ದಾರೆ.

ಆದರೆ ಕಾರ್ಯಕರ್ತರು ಅಲ್ಲದ ಪ್ರಾಥಮಿಕ ಸದಸ್ಯತ್ವ ಇಲ್ಲ ಇವರಿಗೆ ಟಿಕೇಟ್ ಸಿಗುವುದು ಹೇಗೆ ಸಾಧ್ಯ ಎಂದು ಕಾರ್ಯಕರ್ತರೆ ಆಡಿಕೊಳ್ಳುತ್ತಿದ್ದಾರೆ.
ಕೇವಲ ಗೋಕರ್ಣದಲ್ಲಿ ಒಂದು ಹೋಮ-ಹವನ ಮಾಡಿದ ಮಾತ್ರಕ್ಕೆ ಟಿಕೆಟ್ ನೀಡುವುದಾದರೆ ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರು ಯಾಕೆ ಬೇಕು. ಎಂದು ಪ್ರಶ್ನೆ ಪಕ್ಷದ ಮೂಲ‌ ಕಾರ್ಯಕರ್ತರು ಆಡಿಕೊಳ್ಳುತ್ತಿದ್ದು, ಹೋಮ-ಹವನ ಮಾಡಿದ್ದರೆ ಟಿಕೆಟ್ ಕೊಡುವುದಾದರೆ.ಪಕ್ಷಕ್ಕಾಗಿ ಹಗಲಿರುಳು ದುಡಿದು ಪಕ್ಷ ಸಂಘಟನೆ ಮಾಡುವುದನ್ನ ಬಿಟ್ಟು, ಚುನಾವಣೆ ಬಂದಾಗ ಹೋಮ ಮಾಡಿಕೊಂಡು ಉಳಿದರೆ ಸಾಕು ಎಂದು ಆಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೂಗು, ನಿನ್ನೆ ಮೊನ್ನೆ ಹುಟ್ಟಿದಲ್ಲ. ಕಳೆದ ಬಿಜೆಪಿ ಸರಕಾರ ಇದ್ದಾಗಲೆ ಈ ಸುದ್ದಿ ಭಾರಿ ಚರ್ಚೆ ಯಾಗಿತ್ತು, ಆದರೆ ಅಂದು ಅನಂತಮೂರ್ತಿ ಬಾಯ್ ಬಿಡಲಿಲ್ಲ. ಈಗ ನಮ್ಮ ಸರಕಾರ ಬಂದ ಮೇಲೆ “ತನ್ನದೊಂದು ಎಲ್ಲಿಡಲಿ,” ಎಂದು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ವ್ಯಂಗ್ಯವಾಡುತ್ತಿದ್ದಾರೆ.