ಸುದ್ದಿಬಿಂದು ಬ್ಯೂರೋ
ಭಟ್ಕಳ : ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ಜೆಡಿಎಸ್ ಭಟ್ಕಳ ತಾಲೂಕು ಅಧ್ಯಕ್ಷರನ್ನಾಗಿ ಯುವ ನ್ಯಾಯವಾಧಿ ಮಂಜುನಾಥ ಗೊಂಡ ಅವರನ್ನು ಆಯ್ಕೆ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲಾ ಜಾತ್ಯತೀತ ಜನತಾದಳ, ಭಟ್ಕಳ ತಾಲೂಕಿನ ಅತಿ ಸಣ್ಣ ಸಮುದಾಯದಲ್ಲಿ ಒಂದಾದ ಗೊಂಡ ಸಮುದಾಯದ ಮಂಜುನಾಥ ಗೊಂಡ (ನ್ಯಾಯವಾಧಿ) ಅವರನ್ನು ಆಯ್ಕೆ ಮಾಡಿ ಜೆಡಿಎಸ್ ಉತ್ತರಕನ್ನಡ ಜಿಲ್ಲಾ ಅಧ್ಯಕ್ಷ ಗಣಪಯ್ಯ ಗೌಡ ಅವರು ಆದೇಶ ಹೊರಡಿಸಿದ್ದಾರೆ. ಭಟ್ಕಳ ಇದೊಂದು ಮಾದರಿ ನಡೆಯಾಗಿದ್ದು ಜೆ.ಡಿ.ಎಸ್ ಪಕ್ಷ ಸಮಾಜದ ಎಲ್ಲಾ ವರ್ಗವನ್ನು ಗಣನೆಗೆ ತೆಗೆದುಕೊಂಡು ಹೋಗುತ್ತದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಇನ್ಹೂ ಈ ಹಿಂದೆ ತಾಲೂಕು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜವರ್ಧನ ನಾಯ್ಕ ಅವರನ್ನು ಜಿಲ್ಲಾ ಹಿಂದುಳಿದ ಸಂಘಟನಾ ಕಾರ್ಯದರ್ಶಿಯಾಗಿ ಪದೋನ್ನತಿಗೊಳಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಗಣಪಯ್ಯ ಗೌಡರು ಆದೇಶ ಹೊರಡಿಸಿದ್ದಾರೆ. ನೂತನವಾಗಿ ಭಟ್ಕಳ ಜೆಡಿಎಸ್ ತಾಲೂಕ ಅಧ್ಯಕ್ಕರಾಗಿ ಆಯ್ಕೆಯಾದ ವಕೀಲ ಮಂಜುನಾಥ್ ಗೊಂಡ ಅವರಿಗೆ ಭಟ್ಕಳ -ಹೊನ್ನವಾರ ವಿಧಾನಸಭಾ ಜೆಡಿಎಸ್ ಅಭ್ಯರ್ಥಿ, ಹೈಕೋರ್ಟ್ ನ್ಯಾಯವಾಧಿಗಳಾಗಿರುವ ನಾಗೇಂದ್ರ ನಾಯ್ಕ ಅವರು ಅಭಿನಂದನೆಗಳು ಸಲ್ಲಿಸಿದ್ದಾರೆ.