ಸುದ್ದಿಬಿಂದು ಬ್ಯೂರೋ
ಹಳಿಯಾಳ
: ಜೆ.ಡಿ.ಎಸ್. ಅಭ್ಯರ್ಥಿಎಸ್.ಎಲ್ ಘೋಟ್ನೆಕರ್ ಅವರು ತಮ್ಮ ಚುನಾವಣಾ ಪ್ರಚಾರದ ಕರಪತ್ರದಲ್ಲಿ ಸಂವಿಧಾನ ಶಿಲ್ಪಿ ಡಾ|ಬಾಬಾ ಸಾಹೇಬ ಅಂಬೇಡ್ಕರ ಮಹಾತ್ಮಾ ಗಾಂಧಿ ಅವರ ಭಾವಚಿತ್ರ ಮುದ್ರಿಸಿ ಜಾತಿ ಓಲೈಕೆ ರಾಜಕಾರ ಮಾಡುತ್ತಿದ್ದಾರೆ. ಇದು ಚುನಾವಣೆ ನೀತಿ ಸಂಹಿತೆ ಉಲ್ಲಘನೆಯಾಗಿದ್ದು ಈ ತಕ್ಷಣ ಆ ಕರ ಪತ್ರವನ್ನ ವಶಕ್ಕೆ ಪಡೆದು ಶಿಸ್ತುಕ್ರಮ ಕೈಗೊಳ್ಳಬೇಕೆಂದು ಯಲ್ಲಪ್ಪಾ ಹೊನ್ನೋಜಿ ಚುನಾವಣಾಧಿಕಾರಿಗಳಿಗೆ ಮನವಿ ಮೂಲಕ‌ ದೂರಿದ್ದಾರೆ.

ಹಳಿಯಾಳ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಅಭ್ಯರ್ಥಿಯಾಗಿರುವ ಎಸ್ ಎಲ್ ಘೋಟ್ನೆಕರ್ ಅವರು ಚುನಾವಣಾ ಕರ ಪತ್ರದಲ್ಲಿ ಅಂಬೇಡ್ಕರ್ ಹಾಗೂ ಗಾಂಧಿಜೀಯವರ ಪೋಟೋ ಮುದ್ರಿಸಿ ಈ ಕರಪತ್ರಗಳನ್ನು ಮನೆ ಮನೆಗೆ ಹಂಚುವ ಮೂಲಕ ಜಾತಿ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇವರು ಚುನಾವಣೆ ನೀತಿ ಸಂಹಿತೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಯಾವುದೇ ಪಕ್ಷದ ಕರಪತ್ರಗಳಲ್ಲಿ ಅಂಬೇಡ್ಕರ ಹಾಗೂ ಗಾಂಧಿಜಿಯವರ ಪೋಟೋಗಳನ್ನು ಬಳಸಬಾರದೆಂದು ನಿಯಮ ಇದೆ. ಆದರೂ ಸಹ ಜೆ.ಡಿ.ಎಸ್. ಅಭ್ಯರ್ಥಿಯಾಗಿರುವ ಎಸ್.ಎಲ್. ಘೋಟ್ನೆಕರ್ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಘನೆ ಮಾಡಿರುವುದು ಸರಿಯಲ್ಲ.

ಚುನಾವಣಾ ಅಧಿಕಾರಿಗಳು ಈ ಬಗ್ಗೆ ತಕ್ಷಣ ತನಿಖೆ ನಡೆಸಿ ಜಾತಿ ಓಲೈಕೆ ಮುಲಕ ಮತ ಯಾಚನೆ ನಡೆಸುತ್ತಿರುವ ಜೆಡಿಎಸ್ ಅಭ್ಯರ್ಥಿ ವಿರುದ್ಧ ಚುನಾವಣಾ ಅಧಿಕಾರಿಗಳು ಸೂಕ್ತ‌ ಕಾನೂನು ರೀತಿಯ ಕ್ರಮ‌ ಕೈಗೊಳ್ಳುವಂತೆ‌ ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸಲ್ಲಿಸುವ ವೇಳೆ ಗಣೇಶ ರಾಠೋಡ, ರಾಘು ಛಲವಾಧಿ, ಹನುಮಂತ ಛಲವಾಧಿ,ಕುಮಾರಕಲ್ಲಬಾವಿ ಹಾಜರಿದ್ದರು..