suddibindu.in
ಭಟ್ಕಳ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಇಂದು ಇಲ್ಲಿನ ಸೋಡಿಗದ್ದೆ ಮಹಾಸತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಶುಭ ಸಂಕೇತ ಎನ್ನುವಂತೆ ದೇವರಿಂದ ಸಿಂಗಾರ ಪ್ರಸಾದವಾಗಿದೆ.
ಬೆಳಕೆ ಜಿಲ್ಲಾ ಪಂಚಾಯತಿ ಕ್ಷೇತ್ರದ ಪ್ರಚಾರ ಸಭೆಗೆ ತೆರಳುವ ಪೂರ್ವ ಸೋಡಿಗದ್ದೆ ಮಹಾಸತಿ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ದೇವರ ದರ್ಶನ ಪಡೆದು ಪ್ರಾರ್ಥಿಸಿಕೊಂಡರು. ಈ ವೇಳೆ ದೇಗುಲದ ಅರ್ಚಕರು ಸಿಂಗಾರವನ್ನೇರಿಸಿ, ‘ಡಾ.ಅಂಜಲಿಯವರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಪ್ರಸಾದ ನೀಡಿ ಅವರನ್ನು ಆಶೀರ್ವದಿಸಬೇಕು’ ಎಂದು ಪ್ರಾರ್ಥಿಸಿಕೊಂಡರು.
ಇದನ್ನೂ ಓದಿ
- 21 ವರ್ಷ ಪೂರೈಸಿದ ಆರ್.ವಿ. ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ : ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿ.!
- ಮಾಧ್ಯಮ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಆಗಲಿದೆ : ಮಹಾಬಲ ಸೀತಾಳಬಾವಿ
- ಕಾಣೆಯಾದ ಒಂದು ವರ್ಷದ ಬಳಿಕ ಪೊಲೀಸರಿಗೆ ದೂರು
ಈ ವೇಳೆ ದೇವರ ಶಿರಭಾಗದಿಂದ ಸಿಂಗಾರದ ಪ್ರಸಾದವಾಗಿದ್ದು, ನೆರೆದಿದ್ದವರೆಲ್ಲ ಒಮ್ಮೆ ರೋಮಾಂಚನಗೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಅವರ ಪತ್ನಿ, ಮಗಳು ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರು ಇದ್ದರು.