suddibindu.in
ಹುಬ್ಬಳ್ಳಿ: ಯುವತಿ ಪ್ರೀತಿ ಮಾಡಲು ನಿರಾಕರಣೆ ಮಾಡಿದಕ್ಕೆ ಭಗ್ನ ಪ್ರೇಮಿಯೊಬ್ಬ ಯುವತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಗರದ ವೀರಾಪುರ ಓಣಿಯ ಕರಿಯಮ್ಮದೇವಸ್ಥಾನ ಬಳಿ ಇಂದು ಬೆಳಗಿನ ಜಾವ ನಡೆದಿದೆ.

ಅಂಜಲಿ (20) ಕೊಲೆಯಾದ ಯುವತಿ ಆಗಿದ್ದು, 24ವರ್ಷದ ಗೀರೀಶ ಸಾವಂತ ಎಂಬಾತ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೇಲ ದಿನಗಳಿಂದ ಪ್ರೀತಿಸಲು ಹುಡುಗಿಯ ಹಿಂದೆ ಈ ಯುವಕ ಬಿದ್ದಿದ್ದಾ ಎನ್ನಲಾಗಿದೆ.ಅದಕ್ಕೆ ಯುವತಿ ಒಪ್ಪಿಗೆ ನೀಡಿರಲಿಲ್ಲ ಎನ್ನಲಾಗಿದೆ.

ಈ ಕಾರಣಕ್ಕೆ ಆತ ಯುವತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಕೊಲೆ ಆರೋಪಿ ಪರಾರಿಯಾಗಿದ್ದು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.