ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಲೋಕಸಭಾ. ಕ್ಷೇತ್ರದಿಂದ(Varanasi Lok Sabha Constituency) ಸತತ ಮೂರನೇ ಬಾರಿಗೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಉಮೇದುವಾರಿಕೆ ಸಲ್ಲಿಕೆ ಮಾಡಿರುವ ಅವರು ನಾಲ್ಕು ಬಂಗಾರದ ಉಂಗುರು ಹಾಗೂ 52 ಸಾವಿರ ನಗದನ್ನಷ್ಟೆ ಹೊಂದಿದ್ದು ಅವರ ಬಳಿ ಒಟ್ಟೂ 3.02 ಕೋ. ರು ಮೌಲ್ಯದ ಚರಾಸ್ತಿಯಿದೆ.
- ಕೊಲೆಯಾದ 18 ತಿಂಗಳ ಬಳಿಕ ಮನೆಗೆ ಬಂದ “ಲಲಿತಾ”
- Breaking News| ವಿಧಾನ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ರಾಜೀನಾಮೆ.!
- ಕಿಕ್ಕೇರಿಸುವ ಮದ್ಯವೇ ಈ ದೇವರಿಗೆ ನೈವೇದ್ಯ : ಉತ್ತರ ಕನ್ನಡದಲ್ಲೊಂದು ವಿಶೇಷ ಜಾತ್ರೆ
ಪ್ರಧಾನಿ ಮೋದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (State Bank of India) ಎರಡು ಖಾತೆಗಳನ್ನು ಹೊಂದಿದ್ದು. ಗಾಂಧಿನಗರ ಎಸ್‌ಬಿಐನ ಶಾಖೆಯಲ್ಲಿ 52,920 ರು.ಗಳನ್ನು ಠೇವಣಿ ಇರಿಸಿದ್ದರೆ, ವಾರಣಾಸಿ ಎಸ್‌ಬಿಐನ ಶಾಖೆಯಲ್ಲಿ ಕೇವಲ 7,000 ರು. ಠೇವಣಿ ಇರಿಸಿದ್ದಾರೆ. 2,85,60,338 0. ಮೌಲ್ಯದ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದಾರೆ. ಪುಧಾನಿಯವರ ಬಳಿ 2,67,750 2. ಚಿನ್ನದ ಉಂಗುರಗಳಿವೆ. ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್‌ನಲ್ಲಿ 9,12,398 ರು. ಇದೆ ಎಂದು ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಘೋಷಿಸಿದ್ದಾರೆ.
ಪ್ರಧಾನಿ ಮೋದಿ 52,920 ರು. ನಗದು ಹೊಂದಿದ್ದಾರೆ. ಕಾರು,ಬಂಗಲೆಯಂತಹ ಯಾವುದೆ ಸ್ಥಿರಾಸ್ತಿ ಇಲ್ಲ. ಗುಜರಾತಿನಲ್ಲಿ ಇದ್ದ ಒಂದು ನಿವೇಶನ ಹಕ್ಕನ್ನು ಮೋದಿದಾನ ಮಾಡಿದ್ದಾರೆ. ಷೇರು, ಬಾಂಡ್, ಮ್ಯುಚುವಲ್ ಫಂಡ್ ಹೂಡಿಕೆ ಮಾಡಿಲ್ಲ. ಯಾವುದೇ ಸ್ವಂತ ವಾಹನ ಇಲ್ಲ. 2018-19 ರ ಆರ್ಥಿಕ ವರ್ಷದಲ್ಲಿ 11,14.230 ರು. ಆದಾಯವಿದ್ದರೆ 2022-23 ಇದು 23,56,080 ರು.ಗೆ ಏರಿಕೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.