ಸುದ್ದಿಬಿಂದು ಬ್ಯೂರೋ
ಕುಮಟಾ
: ರಾಜ್ಯ ವಿಧಾನಸಭಾ ಚುನಾವಣೆ ಮೇ 10ರಂದು ನಡೆಯಲಿದ್ದು,ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಆದರೆ ಎಲ್ಲಾ ರಾಜಕಾರಣಿಗಳು ಜನರನ್ನ ಸೇರಿ ಶಕ್ತಿ ಪ್ರದರ್ಶನಕ್ಕೆ ಮುಂದಾಗುತ್ತಿರುವುದು ಜನಸಾಮಾನ್ಯರು ಪರದಾಡುವಂತಾಗಿದೆ.

ಇಂದು ಉತ್ತರಕನ್ನಡ ಜಿಲ್ಲೆಯ ಅನೇಕ ಕಡೆಗಳಲ್ಲಿ ಹಲವು ಘಟಾನಿಘಟಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.ತಮ್ಮ ನಾಮಪತ್ರ ಸಲ್ಲಿಕೆಗಾಗಿ ಹೆದ್ದಾರಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ.ಇವರ ಮೆರವಣಿಗೆಗಳಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರು ಹಾಗೂ ಜನಸಾಮಾನ್ಯರು ಪರದಾಡು ಪರಿಸ್ಥಿತಿ ಎದುರಾಗಿತ್ತು. ಕುಮಟಾದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಹೆದ್ದಾರಿ ಬಂದ್ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಪಡಿಸಲಾಗಿದೆ ಎನ್ನುವ ಬಗ್ಗೆ ಅನೇಕರು ಆರೋಪಿಸಿದ್ದಾರೆ.ಅನೇಕರಿಗೆ ಬಾಯಾರಿಕೆ ಆಗಿ ಕುಡಿಯಲು ನೀರಿಲ್ಲದೆ‌ ಪರದಾಡಿದ್ದರು‌.

ಬಸ್ ಇಲ್ಲದೆ ಕಾದು ಸುಸ್ತಾದ ಜನ

ಇನ್ನೂ ಈ ರಾಜಕಾರಣಿಗಳ ಮೆರವಣಿಗೆ ಹಳ್ಳಿಹಳ್ಳಿಗಳಿಂದ ಜನರನ್ನ ಕರೆತರು ಇರುವ ಎಲ್ಲಾ ಕೆಎಸ್ಆರ್ ಟಿಸಿ ಬಸ್ ಗಳನ್ನ ಬಾಡಿಗೆಗೆ ಪಡೆದುಕೊಂಡಿದ್ದಾರೆ‌. ಇದರಿಂದ ಕೆಲಸ ಕಾರ್ಯಗಳಿಗೆ ಹೋಗುವವ ಜನರಿಗೆ ಒಂದು ರೀತಿಯ ಸಮಸ್ಯ ಆದರೆ. ಇನ್ನೂ ಆಸ್ಪತ್ರೆ ಹಾಗೂ ಇನ್ನಿತರ ಕಡೆ ಪ್ರಯಾಣಿಕರು ರಸ್ತೆಯಲ್ಲಿ ನಿಂತು ಕಾಯುತ್ತಿದ್ದರೆ‌. ಇನ್ನೂ ಕೆಲವರು ಹೆದ್ದಾರಿ ತಡೆಯಾಗಿದ್ದರಿಂದ ವಾಹನದಲ್ಲೆ ಕುಳಿತು ಕಾಲ‌ ಕಳೆಯಬೇಕಾಯಿತ್ತು. ಸೆಖೆ‌ ಹಾಗೂ ಬಿಸಿಲ ತಾಪ ತಾಳಲಾರದೆ ರಾಜಕಾರಣಿಗಳ ವಿರುದ್ದ ಹಿಡಿಶಾಪ‌ ಹಾಕಿರುವ ಪ್ರಸಂಗ ಸಹ ನಡೆದಿದೆ.

ಮೆರವಣಿಗೆ ಹತೋಟಿಗೆ ತರಲು ವಿಫಲ

ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು ಅವರನ್ನ ಹತೋಟಿಗೆ ತೆಗೆದುಕೊಳ್ಳಲು ಪೊಲೀಸ್ ಇಲಾಖೆ ಸಹ ವಿಫಲವಾದಂತೆ ಕಾಣುತ್ತಿತ್ತು. ಮೆರವಣಿಗೆಯಲ್ಲಿ ಎಷ್ಟು ಸಂಖ್ಯೆಯಲ್ಲಿ ಜನ ಸೇರಬಹುದು ಎನ್ನುವ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ಪಡೆದು ಆ ಪ್ರಮಾಣದಲ್ಲಿ ಭದ್ರತೆಗಾಗಿ ಪೊಲೀಸರನ್ನ ನಿಯೋಜನೆ ‌ಮಾಡಿದ್ದರೆ.ಜನರನ್ನ ನಿಯಂತ್ರಣ ಮಾಡುವುದು ಹಾಗೂ ಮೆರವಣಿಗೆಯಿಂದ ಜನಸಾಮಾನ್ಯರಿಗೆ ಆಗುವ ತೊಂದರೆಗಳನ್ನ ತಪ್ಪಿಸಬಹುದಾಗಿತ್ತು.