ಸುದ್ದಿಬಿಂದು ಬ್ಯೂರೋ
ಕುಮಟಾ
: ಕುಮಟಾ ಹೊನ್ನಾವರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗಿರುವ ಸೂರಜ್ ‌ನಾಯ್ಕ ಸೋನಿ ಅವರು ಇಂದು ನಾಮ‌ಪತ್ರ‌ ಸಲ್ಲಿಕೆ ಮಾಡಿದ್ದರು.
ಪಟ್ಟಣದ ಜೆಡಿಎಸ್ ಕಚೇರಿಯಿಂದ ಯಾವುದೆ ಅದ್ದೂರಿ, ಅಬ್ಬರ,‌ಆರ್ಭಟ ಇಲ್ಲದೆ ಕಾರ್ಯಕರ್ತರ ಜೊತೆಗೂಡಿ  ಸರಳವಾಗಿ ತೆರಳಿ ನಾಮಪತ್ರ ಸಲ್ಲಿಕೆ‌ ಮಾಡಿದ್ದರು.

ಈ ವೇಳೆ‌ ಮಾಧ್ಯಮದವರ ಜೊತೆ ಮಾತನಾಡಿದ ಸೂರಜ್ ನಾಯ್ಕ ಸೋನಿ, ನಾನು ಈ ಕ್ಷೇತ್ರದಲ್ಲಿ ‌ಕಳೆದ ಎರಡು ದಶಕದಿಂದ‌ ಜನರ‌ ಕಷ್ಟಗಳಿಗೆ ಸ್ಪಂಧಿಸುತ್ತಾ ಬಂದಿದ್ದೇನೆ‌‌.ಒಮ್ಮೆ ನನಗೆ ಅವಕಾಶ ಮಾಡಿಕೊಟ್ಟರೆ‌ ನಿಮ್ಮೆರ ಸೇವೆಯನ್ನ ಪ್ರಾಮಾಣಿಕವಾಗಿ ಮಾಡಲು ಬಯಸಿದ್ದೇನೆ. ಈ ಭಾರಿ ಒಮ್ಮೆ ಅವಕಾಶ ನೀಡಿ ಎಂದು ವಿನಂತಿಸಿಕೊಂಡರು‌.

ಈ‌ವೇಳೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸೂರಜ್ ನಾಯ್ಕ‌ಸೋನಿ ಗೆಳೆಯರ ಬಳಗದ ಅಭಿಮಾನಿಗಳು ಹಾಜರಿದ್ದರು‌.