ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ: ನಗರದ ಕುಳಗಿ ರಸ್ತೆಯ ಸೇತುವೆಯಿಂದ ಕಾಳಿ ನದಿಗೆ ಮಹಿಳೆಯೋರ್ವಳು ಹಾರಿದ ಘಟನೆಬ ನಡೆದಿದೆ,ನದಿಗೆ ಹಾರಿದ ಮಹಿಳೆ ಸುಮಾರು 30ವರ್ಷದ ವಯಸ್ಸಿನವಳಾಗಿದ್ದಾಳೆಂದು ತಿಳಿದು ಬಂದಿದೆ.ಈ ಮಹಿಳೆಯ ಬಗ್ಗೆ ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ನದಿಗೆ ಮಹಿಳೆ ಹಾರಿದ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ವೈಲ್ಡರ್ ನೆಸ್ಟ್ ಮತ್ತು ಪ್ಲೈ ಕ್ಯಾಚರ್ ನವರ ರಾಫ್ಟ್ ಜೊತೆಗೆ ನುರಿತ ಸಿಬ್ಬಂದಿಗಳ ತಂಡವನ್ನು ಕರೆಸಿ, ಶೋಧ ಕಾರ್ಯಕ್ಕಿಳಿದಿದೆ.
ಶೋಧ ಕಾರ್ಯ ನಡೆಸಲಾಗಿದ್ದು,ನದಿಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿರುವುದರಿಂದ ಈವರೆಗೆ ಮಹಿಳೆ ಪತ್ತೆಯಾಗಿಲ್ಲ.ರಾತ್ರಿ ಸಮಯದಲ್ಲಿ ಕಾರ್ಯಾಚರಣೆ ಕಷ್ಟ ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ನಾಳೆಗೆ ಮುಂದುವರಿಸಲಾಗಿದೆ.
ಗಮನಿಸಿ