ಸುದ್ದಿಬಿಂದು ಬ್ಯೂರೋ
ಕಾರವಾರ: ಉತ್ತರಕನ್ನಡ ಜಿಲ್ಲೆಯಿಂದ ಶಿಕ್ಷಣ ಇಲಾಖೆಯಲ್ಲಿ ಹೊಸದಾಗಿ ನೇಮಗೊಂಡ‌ ಶಿಕ್ಷಕರಿಗೆ ಸಿಂಧುತ್ವ ಪ್ರಮಾಣ ಪತ್ರ ಸಿಗದೆ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ,ದೇವರು ಕೊಟ್ಟರು ಪೂಜಾರಿ ಕೊಡದಂತಾಗಿದೆ.ವಿಳಂಬ ಮಾಡದೆ ಸಿಂಧುತ್ವ ಪ್ರಮಾಣ‌ ಪತ್ರ ನೀಡಬೇಕು ಎಂದು ಮುಖ್ಯಮಂತ್ರಿಗಳು ಹೇಳುತ್ತಾ ಬಂದರು ಇಲ್ಲಿನ ಅಧಿಕಾರಿಗಳು ಖ್ಯಾರೆ ಎನ್ನದಂತಾಗಿದೆ.

ರಾಜ್ಯದ ಬೇರೆ ಎಲ್ಲಾ ಜಿಲ್ಲೆಯಿಂದ ಶಿಕ್ಷಣ ಇಲಾಖೆಗೆ ಹೊಸದಾಗಿ ನೇಮಕಗೊಂಡಿರುವ ಶಿಕ್ಷಕರಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡಲಾಗಿದೆ. ಆದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ ಒಂದೇ ಒಂದು ಸಿಂಧುತ್ವ ಪ್ರಮಾಣ‌ ಪತ್ರ ನೀಡಿಲ್ಲ ಎನ್ನುವ ಬಗ್ಗೆ ಗಂಭೀರ ಆರೋಪ ಕೇಳಿಬರುತ್ತಿದೆ.

ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ಉತ್ತರಕನ್ನಡ ಜಿಲ್ಲೆಯಿಂದ ಎರಡು ನೂರಕ್ಕೂ ಅಧಿಕ ಜನರು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಶಿಕ್ಷಣ ಇಲಾಖೆಯಲ್ಲಿ ಆಯ್ಕೆಗೊಂಡವರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಆದರೆ ಸಿಂಧುತ್ವ ಪ್ರಮಾಣ ಪತ್ರ ಇಲ್ಲದೆ ಹಾಜರಾಗದಂತಾಗಿದೆ.ಉಳಿದೆಲ್ಲಾ ಜಿಲ್ಲೆಯಲ್ಲಿ ಸಿಂಧುತ್ವ ಪ್ರಮಾಣ ಪತ್ರ ನೀಡಲಾಗಿದ್ದರೂ ಉತ್ತರಕನ್ನಡ ಜಿಲ್ಲೆಯಲ್ಲಿ ಯಾಕೆ ವಿಳಂಬ ಎನ್ನುವುದನ್ನ ಅಧಿಕಾರಿಗಳೆ ಉತ್ತರ ನೀಡಬೇಕಿದೆ.

ಸಿಂಧುತ್ವಕ್ಕಾಗಿ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದರು ಸಹ ಇದುವರೆಗೂ ಪ್ರಮಾಣ ಪತ್ರ ಲಭ್ಯವಾಗಿಲ್ಲ. ಈಗಾಲೇ ಬೇರೆ ಬೇರೆ ಜಿಲ್ಲೆಗೆ ನೇಮಕಗೊಂಡಿದ್ದವರು ಕರ್ತವ್ಯಕ್ಕೆ ಹಾಜರಾಗಲು ಸಿಂಧುತ್ವ ಪ್ರಮಾಣ ಪತ್ರ ಸಿಗದೆ ಊರಿಗೆ ವಾಪಸ್ ಆಗಿದ್ದಾರೆ. ಈ ಬಗ್ಗೆ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿವರು ಜಿಲ್ಲಾಧಿಕಾರಿಗಳ‌ ಕಚೇರಿಗಳಿಗೆ ಅಲೆದಾಡುವುದರಲ್ಲೆ ಸುಸ್ತಾಗಿದ್ದಾರೆನ್ನಲಾಗಿದೆ.