ಸುದ್ದಿಬಿಂದು ಬ್ಯೂರೋ
ಕಾರವಾರ : ನಾನು ಸತೀಶ ಸೈಲ್ ಲವ-ಕುಶ ಇದ್ದ ಹಾಗೆ ನಮ್ಮನ್ನ ಯಾರಿಂದಲ್ಲೂ ಬೇರೆ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಮಂಕಾಳು ವೈದ್ಯ ಅವರು ಹೇಳಿದ್ದರು.

ಅವರು ಇಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಆಯುಷ್ಯ ಇಲಾಖೆಯ ಅಧಿಕಾರಿ ಒಬ್ಬರ ವಿರುದ್ಧ ಮಾಧ್ಯಮದಲ್ಲಿ ವರದಿ ಪ್ರಕಟವಾಗಿದಕ್ಕೆ ಆ ಅಧಿಕಾರಿ ಮಾಧ್ಯಮದರ ಮೇಲೆ‌ದೂರು ದಾಖಲಿಸಿದ ವಿಚಾರವನ್ನ ಚರ್ಚೆ ಮಾಡುವ ವೇಳೆ ಮಾಧ್ಯಮದವರು ತಪ್ಪು ಮಾಡಿದಾಗ ಆಗಾಗ ವರದಿ ಮಾಡುತ್ತಲೆ ಇರುತ್ತಾರೆ. ಅದಕ್ಕೆ ದೂರು ದಾಖಲಿಸುತ್ತಾ ಇದ್ದರೆ ಹೇಗೆ..?

ನಮ್ಮ ಬಗ್ಗೆಯೂ ಸಹ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗತ್ತಾ ಇರುತ್ತೆ. ಅದೆ ರೀತಿ ಸತೀಶ ಸೈಲ್ ಹಾಗೂ ನಮ್ಮ‌ ನಡುವೆ ಸಹ ವರದಿಗಳು ಬರತ್ತಲ್ಲೆ ಇರುತ್ತೆ ಹಾಗಂತ ನಮ್ಮನ್ನ ಬೇರೆ ಮಾಡುವ ಬಗ್ಗೆ ಯಾರೇ ಎಷ್ಟೆ ಪ್ರಯತ್ನ ಮಾಡಿದ್ದರು ಸಾಧ್ಯವಿಲ್ಲ ಎಂದರು.

ಈ ವೇಳೆ ಸಭೆಯಲ್ಲೇ ಇದ್ದ ಶಾಸಕ ಭೀಮಣ್ಣ ನಾಯ್ಕ ಅವರು ನಮ್ಮನ್ನ ವಿಲನ್ ಮಾಡಿದ್ರ ಸರ್? ಎಂದು ಹೇಳುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರು…