ಸುದ್ದಿಬಿಂದು ಬ್ಯೂರೋ
ಕಾರವಾರ: ಬಿಜೆಪಿ ಕಾರ್ಯಾಗಾರ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಕಾರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ಒಳಗಾಗಿದ್ದ ಬಿಜೆಪಿ ಕಾರ್ಯಕರ್ತ ನೋರ್ವ ಸಾವನ್ನರುವ ಘಟನೆ ಧಾರವಾಡದಲ್ಲಿ ನಡೆದಿದೆ‌.

ನಿತೀನ್ ರಾಯ್ಕರ್ ಎಂಬಾತನೆ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾ‌ನೆ. ಶುಕ್ರವಾರ. ಏ.7ರಂದು ಶಿರಸಿಯಲ್ಲಿ ನಡೆದ ಬಿಜೆಪಿ ಕಾರ್ಯಾಗಾರವನ್ನ ಮುಗಿಸಿಕೊಂಡು ವಾಪಸ್ ಕಾರವಾರಕ್ಕೆ ಬರುತ್ತಿದ್ದ ವೇಳೆ ಹಾರೂಗಾರ ಬಳಿ ಇವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರ್ ಗೆ ಟ್ಯಾಂಕರ್ ಡಿಕ್ಕಿ ಹೊಡೆದು ಐವರು ಗಂಭೀರವಾಗಿ ಗಾಯಗೊಂಡಿದ್ದರು.ಅವರಲ್ಲಿ ನಿತೀನ್ ರಾಯ್ಕರ್ ಗಂಭೀರವಾಗಿ ಗಾಯಗೊಡಿದ್ದರು.

ಅಪಘಾತದಲ್ಲಿ ನಿತೀನ್ ರಾಯ್ಕ ಅವರ ತಲೆ ಹಾಗೂ ಎದೆಗೆ ಗಂಭೀರವಾಗಿ ಗಾಯವಾಗಿತ್ತು. ತಕ್ಷಣ ಅವರನ್ನ ಧಾರವಾಡ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದ್ದರೂ ಚಿಕಿತ್ಸೆ ಫಲಕಾರಿಯಾಗದೆ. ಆಸ್ಪತ್ರೆಯಲ್ಲಿಯೆ ಮೃತಪಟ್ಟಿದ್ದಾರೆ.