ಕಾರವಾರ : ಅರಣ್ಯದಲ್ಲಿ ಅಡಗಿಸಿಡಲಾಗಿದ್ದ ಅಕ್ರಮ ಗೋವಾ ಮದ್ಯ ಹಾಗೂ ಮೂವರು ಆರೋಪಿಗಳನ್ನ ಅಬಕಾರಿ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಹೋಟೆಗಾಳಿ ಗ್ರಾಮದ ಭೀಮಕೋಲ್ ಡ್ಯಾಂ ಸಮೀಪದ ಅರಣ್ಯದಲ್ಲಿ ನಡೆದಿದೆ‌.

ಹೋಟೆಗಾಳಿ ಮೂಲದ ಆನಂದ ಮಾಳ್ಸೇಕರ್, ಸತ್ಯವಿಜಯ ಮಾಳ್ಸೇಕರ್, ಮನೋಜ ಕೋಳಂಬಕರ್ ಬಂಧಿತರಾಗಿದ್ದಾರೆ. ಅಬಕಾರಿ ಉಪಾಧೀಕ್ಷಕ ಬಸವರಾಜ ಕರವಿನಕೊಪ್ಪ, ನಿರೀಕ್ಷಕ ದಯಾನಂದ, ಉಪನಿರೀಕ್ಷಕ ಎಂ.ಎಂ.ನಾಯ್ಕ ತಂಡದಿಂದ ದಾಳಿ ನಡೆಸಲಾಗಿದೆ. 89.280 ಲೀ ಗೋವಾ ಮದ್ಯ, 305.500 ಲೀ ಗೋವಾ ಪೆನ್ನಿ, 120 ಲೀ ಗೋವಾ ಬಿಯರ್ ಪತ್ತೆಯಾಗಿದ್ದು ಇದರ ಮೌಲ್ಯ ಸುಮಾರು 1.88 ಲಕ್ಷ ಎಂದು ಅಂದಾಜಿಸಲಾಗಿದೆ.

ಬಂಧಿತರು ಮಾರಾಟ ಮಾಡುವ ಉದ್ದೇಶದಿಂದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿಟ್ಟುಕೊಂಡಿದ್ದರು. ಆರೋಪಿಗಳ ವಿರುದ್ಧ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿಧ. ಅಕ್ರಮವಾಗಿ ಮದ್ಯ ದಾಸ್ತಾನು ಇರಿಸಿದ್ದ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಬಗ್ಗೆ ಕಾರವಾರ ಅಬಕಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ