ಕಾರವಾರ : ಲಿಕ್ಕರ್ ಹಾಗೂ ಮೈನ್ಸ್ ಸಾಗಿಸುತ್ತಿದ್ದ ಎರಡು ಲಾರಿ ನಡುವೆ ಡಿಕ್ಕಿ ಸಂಭವಿಸಿ ಮೈನ್ಸ್ (ಉಸುಕು) ಲಾರಿ ಚಾಲಕ ಮೃತಪಟ್ಟಿರುವ ಘಟನೆ ತೋಡೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೆಳಗ್ಗಿನ ಜಾವ ನಡೆದಿದೆ.

ಅಪಘಾತದಲ್ಲಿ ಮೈನ್ಸ್ ಲಾರಿ ಚಾಲಕ ಬೆಳಗಾವಿಯ ಖಾನಾಪುರದ ರೂಪೇಶ್ ನಾರಾಯಣ ಪಾಟೀಲ್ (23) ಮೃತ ದುರ್ದೈವಿ,ಲಿಂಕರ್ ತುಂಬಿದ ಲಾರಿ ಗೋವಾ ಕಡೆಯಿಂದ ಪಾಂಡಿಚೇರಿ ಕಡೆಗೆ ಹೋಗುತ್ತಿದ್ದು, ಇನ್ನೂ ಮೈನ್ಸ್ ಲಾರಿ ಬೆಳಗಾವಿಗೆ ಸಾಗುತ್ತಿತ್ತು ಎನ್ನಲಾಗಿದೆ.

ತೋಡೂರು ಸಮೀಪ ಉಸುಕು ಲಾರಿಯ ಮುಂದೆ ಲಿಕ್ಕರ್ ಸಾಗಿಸುತ್ತಿದ್ದ ಲಾರಿ ಚಲಿಸುತ್ತಿದ್ದು ಈ ವೇಳೆ ಉಸುಕು ಲಾರಿ ಚಾಲಕ ಲಿಕ್ಕರ್ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾ‌ನೆ ಎನ್ನಲಾಗಿದ್ದು, ಪರಿಣಾಮ ಉಸುಕು ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಇನ್ನೂ ಅಪಘಾತದ ರಭಸಕ್ಕೆ ಎರಡು ಲಾರಿಗಳು ಸಹ ನುಜ್ಜುಗುಜ್ಜಾಗಿವೆ.

ಅಪಘಾತದಿಂದ ಹೆದ್ದಾರಿಯಲ್ಲಿ ಕೆಲ ಸಮಯ ಉಳಿದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಅಪಘಾತದ ಸುದ್ದಿ ತಿಳಿಯುತ್ತಿದಂತೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಕುಸುಮಧರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ರೇನ್ ಮೂಲಕ ಅಪಘಾತಕ್ಕೆ ಒಳಗಾಗಿದ್ದ ಎರಡು ಲಾರಿಯನ್ನ ಸದ್ಯ ಹೆದ್ದಾರಿಯಿಂದ ತೆರವುಗೊಳಿಸಲಾಗಿದೆ. ಘಟನೆ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.