ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರಕನ್ನಡ ಜಿಲ್ಲೆಯ(Uttara Kannada) ಕಾಂಗ್ರೆಸ್ ನಲ್ಲಿ ಸದ್ಯ ಸಂಘಟನೆ ಕೊರತೆ ಎದ್ದು ಕಾಣುತ್ತಿದ್ದು, ಈ ಬಗ್ಗೆ ಪಕ್ಷದ ಮುಖಂಡರೆ ಅಸಮಧಾನ ಹೊರಹಾಕಿದ್ದಾರೆ.ಜಿಲ್ಲಾ ಕಾಂಗ್ರೆಸ್ ಸಂಘಟನೆ ಬಗ್ಗೆ ಮಾಹಿತಿ ಕಲೆ ಹಾಕಿರುವ ಕೆಪಿಸಿಸಿ ನಾಯಕರು ಉತ್ತರಕನ್ನಡ ಜಿಲ್ಲಾಧ್ಯಕ್ಷರನ್ನ ಅತೀ ಶೀಘ್ರದಲ್ಲಿ ಬದಲಾವಣೆ ಮಾಡಲಿದ್ದಾರೆ ಎನ್ನುವ ಸುದ್ದಿ ಕೆಪಿಸಿಸಿ (kpcc)ವಲಯದಿಂದ ಕೇಳಿ ಬರುತ್ತಿದೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರನ್ನ ಬದಲಾವಣೆ ಮಾಡಲಾಗಿತ್ತು. ಆದರೆ ಹೊಸದಾಗಿ ಜಿಲ್ಲಾಧ್ಯಕ್ಷರಾದವರು ಜಿಲ್ಲೆಯ ಆರು ಕ್ಷೇತ್ರದಲ್ಲಿ ಓಡಾಟ ಮಾಡಿ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸುವ ಬಗ್ಗೆ ಶ್ರಮವಹಿಸದೆ. ಕೇವಲ ಕುಮಟಾ ಕ್ಷೇತ್ರ ಒಂದರಲ್ಲೆ ಸುತ್ತಾಡಿ ಉಳಿದ ಅಭ್ಯರ್ಥಿಗಳನ್ನ ಕಡೆಗಣಿಸಿರುವ ಬಗ್ಗೆ ಸ್ಪರ್ಧೆ ಮಾಡಿದ ಅಭ್ಯರ್ಥಿಗಳು ಹಾಗೂ ಪ್ರಮುಖ ಹುದ್ದೆಯಲ್ಲಿರುವ ಮುಖಂಡರುಗಳು ಈ ವಿಚಾರನ್ನ ಕಾಂಗ್ರೆಸ್ ಹೈಕಮಾಂಡ(Congress High Command) ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಹೈ ಕಮಾಂಡ ನಾಯಕರ ಸಹ ಬಂದಿರುವ ದೂರುಗಳನ್ನ ಪರಿಶೀಲನೆ ನಡೆಸಿದ ನಾಯಕರಿಗೂ ಸಹ ಉತ್ತರಕನ್ನಡ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಕೊರತೆ ಆಗಿರುವುದು ಕಂಡು ಬಂದಿದೆಯಂತೆ.
ಹೀಗಾಗಿ ಲೋಕಸಭಾ ಚುನಾವಣಾ ಸಮಯದಲ್ಲಿಯೂ ಸಹ ಇವರನ್ನೆ ಮುಂದುವರೆಸಿದ್ದಲ್ಲಿ ಪಕ್ಷಕ್ಕೆ ಹೀನಾಯವಾದ ಸೋಲು ಗ್ಯಾರಂಟಿ ಎಂದು ಅರಿತುಕೊಂಡ ನಾಯಕರು ಅತೀ ಶೀಘ್ರದಲ್ಲಿ (Congress District President Change) ಜಿಲ್ಲಾಧ್ಯಕ್ಷರ ಬದಲಾವಣೆಗೆ ಮುಂದಾಗಿದೆ ಎನ್ನಲಾಗಿದೆ. ಕೆಲವರ ಹೆಸರು ಕೂಡ ಹೈ ಕಮಾಂಡ ಸಂಗ್ರಹಿಸಿದೆ ಎನ್ನಲಾಗಿದೆ.
ಪ್ರಮುಖವಾಗಿ ಕೆ ಎಚ್ ಗೌಡ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಆರ್ ಎಚ್ ನಾಯ್ಕ,ಕುಮಟಾ ಬ್ಲಾಕ್ ಅಧ್ಯಕ್ಷ ಹೊನ್ನಪ್ಪ ನಾಯಕ, ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆಯ ಜಿಲ್ಲಾಧ್ಯಕ್ಷರೂ ಆಗಿರುವ ರವೀಂದ್ರನಾಥ್ ನಾಯ್ಕ ಹಾಗೂ ಭಾಸ್ಕರ್ ಪಟಗಾರ ಅವರ ಹೆಸರುಗಳು ಕೇಳಿಬರುತ್ತಿದೆ. ಇನ್ನೂ ಅಚ್ಚರಿಯ ಬೆಳವಣಿಗೆ ಏನೆಂದರೆ ಶಿರಸಿ ಶಾಸಕರೂ ಹಾಗೂ ಮಾಜಿ ಜಿಲ್ಲಾಧ್ಯಕ್ಷರು ಆಗಿರುವ ಭೀಮಣ್ಣ ನಾಯ್ಕ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನವನ್ನ ನೀಡಬೇಕ ಎನ್ನುವ ಚಿಂತನೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯರು ಇದ್ದಾರೆ ಎನ್ನಲಾಗುತ್ತಿದ್ದು, ಇದಕ್ಕೆ ಭೀಮಣ್ಣ ನಾಯ್ಕ ಅವರು ಒಪ್ಪಿಗೆ ನೀಡುತ್ತಿಲ್ಲ ಎನ್ನಲಾಗಿದೆ.