ಸುದ್ದಿಬಿಂದು ಬ್ಯೂರೋ
ಕುಮಟ
: ಭಾರೀ ಗಾಳಿ ಮಳೆಯಿಂದಾಗಿ(heavy wind rain,)ಬೃಹತ್ ಗಾತ್ರದ ಆಲದ ಮರವೊಂದು ಮನೆಯ‌ ಮೇಲೆ ಬಿದ್ದು ಮನೆ ಹಾನಿಯಾಗಿದ್ದು, ಅದೃಷ್ಟವಶಾತ್ ಮನೆಯೊಳಗಿದ್ದವರೆಲ್ಲಾ ಪ್ರಾಣಾಪಾಯದಿಂದ ಪಾರಾದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟ ಪಟ್ಟಣ ಉಪ್ಪಿನ ಗಣಪತಿ ದೇವಸ್ಥಾನ ಸಮೀಪ ನಡೆದಿದೆ.

ಪಟ್ಟಣದ ಗಂಗಾಧರ ತಿಮ್ಮಣ್ಣ ಗೌಡ ಹಾಗೂ ಗಣೇಶ ತಿಮ್ಮಣ್ಣ ಗೌಡ ಎಂಬುವವರ ಮನೆಯ ಮಳೆ ಬೃಹತ್ ಗಾತ್ರದ ಆಲದ ಮರ ಬುಡಸಮೇತವಾಗಿ ಕಿತ್ತು ಮನೆಯ ಮೇಲೆ ಬಿದ್ದಿದೆ. ರಾತ್ರಿ ಸುಮಾರು 3-45ರ ಹೊತ್ತಿಗೆ ನಡೆದಿದೆ ಎನ್ನಲಾಗಿದೆ. ಎಲ್ಲರೂ ನಿದ್ದೆಯಲ್ಲಿ ಇದ್ದಾಗ ಈ ಘಟನೆ ನಡೆದಿದೆ. ಮರ ಬಿಳುವ ಸದ್ದು ಕೇಳಿದ ಕುಟುಂಬಸ್ಥರು ಹಿರಿಯರು ಪುಟ್ಟ ಪುಟ್ಟ ಮಕ್ಕಳನ್ನ ಎತ್ತಿಕೊಂಡು ಹೊರ ಬರುವ ಮೂಲಕ ಜೀವ ಉಳಿಸಿಕೊಂಡಿದ್ದಾರೆ.

ಮನೆಯ ಮೇಲೆ ಮರ(tree)ಬಿದ್ದ ಪರಿಣಾಮ ಗಣೇಶ ತಿಮ್ಮಣ್ಣ ಗೌಡ ಅವರ ಮನೆ ಭಾಗಶಃ ಹಾನಿಯಾಗಿದ್ದು, ಇನ್ನೂ ಗಂಗಾಧರ ಗೌಡ ಅವರ ಮನೆ ಸಹ ಜಖಂ ಗೊಂಡಿದೆ. ಇನ್ನೂ ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ (revenue department)ಅಧಿಕಾರಿಗಳು ರಾತ್ರೋ ರಾತ್ರಿ ಸ್ಥಳಕ್ಕೆ ತೆರಳಿ ಮನೆಯ ಮೇಲೆ ಬಿದ್ದ ಮರವನ್ನ ತೆರವು ಮಾಡಿಸುವಲ್ಲಿ ಸಹಕರಿಸಿದ್ದು, ಆ ಎರಡು ಕುಟುಂಬಸ್ಥರಿಗೆ ಸಮಸ್ಯೆ ಆಗದಂತೆ ನೋಡಿಕೊಂಡಿದ್ದಾರೆ.