ಸುದ್ದಿಬಿಂದು ಬ್ಯೂರೋ
ಅಂಕೋಲಾ : ಉಡುಪಿ(Udupi)ಅಧಿಕಾರಿಯ ಅಂಕೋಲಾ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ( Lokayukta Raid)ನೆಡೆಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ(uttara Kannada) ಅಂಕೋಲಾ ತಾಲೂಕಿನ ಬೇಲೇಕೇರಿಯಲ್ಲಿ ನಡೆದಿದೆ.

ಬೇಲೇಕೇರಿಯಲ್ಲಿರುವ ಉಡುಪಿಯ ಕಮರ್ಷಿಯಲ್ ಟ್ಯಾಕ್ಸ್Commercial Tax,) ಅಸಿಸ್ಟೆಂಟ್ ಎಂಜಿನಿಯರ್ ರಾಜೇಶ ಬೇಳ್ಕೆರೆ ಅವರ ಮೂಲ ಮನೆ ಮನೆ ಮೇಲೆ ದಾಳಿ ನಡೆಸಲಾಗಿದೆ.

ರಾಜೇಶ ಬೇಳ್ಕೆರೆ ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮಾಡಿಕೊಂಡಿದ್ದಾರೆ ಎನ್ನುವ ದೂರಿನ ಮೇಲೆ ಈ ದಾಳಿ ನಡೆಸಲಾಗಿದೆ.ಬೇಲೇಕೇರಿಯಲ್ಲಿ ರಾಜೇಶ ಅವರ ತಂದೆ ತಾಯಿ ಇದ್ದು ಅವರನ್ನ ವಿಚಾರಣೆ ನಡೆಸುತ್ತಿದ್ದು, ಪ್ರಮುಖ ದಾಖಲೆಗಳನ್ನ ಪರೀಶನೆ ನಡೆಸುತ್ತಿದ್ದಾರೆ.
ಉಡುಪಿಯ ಲೋಕಾಯುಕ್ತ ಅಧಿಕಾರಿ ರಾಜಪ್ಪ, ಮಹೇಶ್, ರಾಘವೇಂದ್ರ, ವಿನಾಯಕ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ.