ಸುದ್ದಿಬಿಂದು ಬ್ಯೂರೋ ವರದಿ(SuddiBindu Digital News)
ಶಿರಸಿ: ತಾಲೂಕಿನ ಹುಣಸೆಕೊಪ್ಪದ ಹೀರೆಬೈಲ್ ಕುಂಟೆಮನೆಯಲ್ಲಿ ಮಹಿಳೆ ಓರ್ವಳು ಸ್ನಾನಕ್ಕಾಗಿ ಬಿಸಕ ನೀರು ಕಾಯಿಸಲು ಬಚ್ಚಲು ಮನೆಗೆ ಬೆಂಕಿ ಹಾಕಿದ ವೇಳೆ ಬೆಂಕಿ ಮಹಿಳೆ ತಗುಲಿ ಆಕೆ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಗಂಗೆ ಬಂಗಾರ್ಯ ಗೌಡ (55)ಅವರು ಬಚ್ಚಲು ಮನೆಗೆ ಬೆಂಕಿ ಹಾಕಲು ಹೋಗಿದ್ದರು. ಅಬ್ಬಿ ಒಲೆಗೆ ಪೆಟ್ರೋಲ್ ಸುರಿದ ಅವರು ಲೈಟರ್’ನಿಂದ ಬೆಂಕಿ ಹಚ್ಚಿದ್ದರು. ಒಲೆಗೆ ಸುರಿದ ಪೆಟ್ರೋಲ್ ಅವರಿಗೆ ಅರಿವಿಲ್ಲದಂತೆ ಮೈಮೇಲೆ ಇದ್ದ ಬಟ್ಟೆಗೆ ತಾಗಿದ್ದು, ಬೆಂಕಿಯ ಜ್ವಾಲೆ ಬಟ್ಟೆಗೂ ವ್ಯಾಪಿಸಿತು. ಇದರಿಂದ ಬಟ್ಟೆಯೊಂದಿಗೆ ಗಂಗೆ ಬಂಗಾರ್ಯ ಗೌಡ ಸಹ ಉರಿದರು. ಕೈಯಲ್ಲಿದ್ದ ಪೆಟ್ರೋಲ್ ಬಾಟಲಿ ಸಹ ಈ ವೇಳೆ ಸ್ಪೋಟಗೊಂಡು ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದರು.
ಮಹಿಳೆಯನ್ನ ತಕ್ಷಣ ಶಿರಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ವೈದ್ಯರ ಸಲಹೆ ಮೇರೆಗೆ ಗಂಗೆ ಗೌಡರನ್ನು ಟಿಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಯಿತು.ಅಲ್ಲಿನ ವೈದ್ಯರು ಮಹಿಳೆಗೆ ಇನ್ನು ಹೆಚ್ಚಿನ ಚಿಕಿತ್ಸೆ ಬೇಕಿದೆ ಎಂದು ಹೇಳಿರುವುದರಿಂದ ಮಂಗಳೂರು ಆಸ್ಪತ್ರೆಗೆ ಕರೆದೊಯ್ದಾಗ ಕೆ ಎಸ್ ಹೆಗಡೆ ಆಸ್ಪತ್ರೆಯ ವೈದ್ಯರು ಸಹ `ಬದುಕಿಸಿಕೊಳ್ಳುವುದು ಕಷ್ಟ’ ಎಂದು ಹೇಳಿದರು.
ಹೀಗಾಗಿ ಮಂಗಳೂರಿನಿಂದ ವಾಪಸ್ ಶಿರಸಿಗೆ ಗಂಗೆ ಗೌಡರನ್ನು ಕರೆತರುವ ವೇಳೆ ಮಹಿಳೆ ಸಾವನಪ್ಪಿದ್ದಾರೆ. ಶಿರಸಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಗಂಗೆ ಗೌಡ ಅವರು ಸಾವವಪ್ಪಿರುವುದನ್ನು ಖಚಿತಪಡಿಸಿದ್ದು,ಗಂಗೆ ಅವರ ಪತಿ ಬಂಗಾರ್ಯ ಮಂಜಾ ಗೌಡ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ಗಮನಿಸಿ