ಸುದ್ದಿಬಿಂದು ಬ್ಯೂರೋ
ಕಾರವಾರ : ರಾಜಕೀಯವಾಗಿ ಉತ್ತರಕನ್ನಡ ಜಿಲ್ಲೆಯನ್ನ ಅತೀ ಹೆಚ್ಚು ಅವಧಿಗಳ ಕಾಲ ಆಡಳಿದವರು ಯಾರಾದ್ದರೂ ಇದ್ದರೆ ಅದು ಹಳಿಯಾಳ ಕ್ಷೇತ್ರದ ಹಾಲಿ ಶಾಸಕ ಆರ್ ವಿ ದೇಶಪಾಂಡೆ (RV Deshpande) ಅವರು, ಇವರು ಬೃಹತ್ ಕೈಗಾರಿಕೆ (Heavy Industries),ಪ್ರವಾಸೋದ್ಯಮ ಹೀಗೆ ಅನೇಕ ಖಾತೆಯನ್ನ ನಿರ್ವಹಿಸಿದ್ದಾರೆ. ನಿರೀಕ್ಷಿತ ಮಟ್ಟದಲ್ಲಿ ಜಿಲ್ಲೆ ಅಭಿವೃದ್ಧಿ ಕಂಡಿಲ್ಲ ಎನ್ನುವ ಆರೋಪ ಜಿಲ್ಲೆಯ ಜನರಿಂದ ಇಂದಿಗೂ ಕೇಳಿ ಬರುತ್ತಿದ್ದು,ಈಗ ಇವರಿಗೆ ಅಧಿಕಾರ ಸಿಗದಿದ್ದಾಗ ಬಾಯ್ ಬಡಿದುಕೊಳ್ಳುತ್ತಿದ್ದಾರೆಂದು ಜಿಲ್ಲೆಯ ಪ್ರಜ್ಞಾವಂತ ಜನರು ಆಡಿಕೊಳ್ಳುತ್ತಿದ್ದಾರೆ.

ಆರ್ ವಿ ದೇಶಪಾಂಡೆಯವರು ಈ ಹಿಂದೆ ಜನತಾ ದಳದಿಂದ ಹಿಡಿದು ಇಂದಿನ ತನಕ ಎರಡು ದಶಕಕ್ಕೂ ‌ಹೆಚ್ಚುಕಾಲ‌ ಅಕ್ಷರಶಃ ಉತ್ತರಕನ್ನಡ ಜಿಲ್ಲೆಯನ್ನ ಆಡಳಿದ್ದಾರೆ.ಪ್ರತಿ ಭಾರೀ ಕೂಡ ಸಚಿವರಾಗಿದ್ದು ಉನ್ನತ ಇಲಾಖೆಯನ್ನ ಪಡೆದು ಸಚಿವರಾಗಿದ್ದಾರೆ.ಬೃಹತ್ ಕೈಗಾರಿಕಾ(Industry)ಸಚಿವರಾಗಿ, ಪ್ರವಾಸೋದ್ಯಮ(Tourism) ಸಚಿವರಾಗಿ ಉತ್ತರಕನ್ನಡ (uttara Kannada)ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಆಡಳಿತ ನಡೆಸಿದ್ದಾರೆ. ಇವರು ಕೈಗಾರಿಕಾ ಸಚಿವರಾಗಿದ್ದ ಪರಿಸರ ಸ್ನೇಹಿಯಾಗಿರುವಂತಹ ಕೈಗಾರಿಕೆ ತಂದಿಲ್ಲ ಎನ್ನುವ ಆರೋಪ ಇದೀಗೂ ಜಿಲ್ಲೆಯಲ್ಲಿ ಜೀವಂತವಾಗಿದೆ.

ಇನ್ನೂ ಪ್ರವಾಸೋದ್ಯಮದ ಬಗ್ಗೆ ಅಧಿಕಾರ ಇಲ್ಲದಾಗ ಇವರು ಮಾತನಾಡುತ್ತಿದ್ದಾರೆ. ಆದರೆ ಇವರೆ ಪ್ರವಾಸೋದ್ಯಮ ಇಲಾಖೆಯ ಸಚಿವರಾಗಿದ್ದಾಗ ಯಾವೊಂದು ಕರಾವಳಿಯ ಕಡಲ ತೀರಗಳು ಪ್ರವಾಸಿಗರು ಬಂದು ಅಪ್ಪಿಕೊಳ್ಳುವಷ್ಟು ಅಭಿವೃದ್ಧಿ ಕಂಡಿಲ್ಲ. ಕಾರವಾರದಿಂದ ಭಟ್ಕಳದ ಶಿರಾಲಿ ತನಕ ಕಡಲತೀರಗಳು ಇದ್ದರೂ ಯಾವೊಂದು ಕಡಲತೀರಗಳು ಅಭಿವೃದ್ಧಿ ಕಂಡಿರುವುದು ಕಾಣುತ್ತಿಲ್ಲ.ಇದೀಗ ಕಾರವಾರ ಕಡಲತೀರಕ್ಕೆ ಬಂದಾಗ ಕಡಲತೀರಗಳು ಸ್ವಚ್ಚವಾಗಿಲ್ಲವೆಂದು ಆರೋಪಿಸಿದ್ದಾರೆ.

ಆದರೆ ಇವರದ್ದೇ ಹಳಿಯಾಳ ಕ್ಷೇತ್ರದ ಬೀದಿ ಬೀದಿಯಲ್ಲಿ ನಿರಂತರವಾಗಿ ಹಂದಿಗಳು ಓಡಾಟ ಮಾಡುತ್ತಿರುವುದಿಂದ ಅಲ್ಲಿ ಮೂಗುಹಿಡಿದುಕೊಂಡು ಓಡಾಟ ಮಾಡಬೇಕಾ ಪರಿಸ್ಥಿತಿ ಇದ್ದರೂ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಇವರು ಆ ಕ್ಷೇತ್ರದಿಂದ ಬರೋಬ್ಬರಿ 9ಭಾರೀ ಆಯ್ಕೆಯಾಗಿದ್ದರೂ ಇನ್ನೂ ಕೂಡ ಆ ಕ್ಷೇತ್ರ ಜಿಲ್ಲೆಯಲ್ಲಿಯೇ ಅತೀ ಹಿಂದೂಳಿದ ಜಿಲ್ಲೆಯಾಗಿ ಉಳಿದುಕೊಂಡಿದೆ. ಇದಕ್ಕೆಲ್ಲಾ ಯಾರು ಕಾರಣ ಎಂದು ಜನ ಪ್ರಶ್ನಿಸುವಂತಾಗಿದೆ.

ಇದೀಗ ನೂತನ ಶಾಸಕರಾಗಿ ಇವರನ್ನೂ ಸೇರಿಸಿ ಆರು ತಿಂಗಳೂ ಪೂರ್ತಿ ಆಗಿಲ್ಲ, ಹೀಗಿರುವಾಗ ಅಧಿಕಾರ ಕೊಟ್ಟಿದ್ದೇವೆ ಅಭಿವೃದ್ಧಿ ಮಾಡಬೇಕು, ನಾವು ಇದ್ದಾಗ ಮಾಡಿಲ್ಲವೇ ಎಂದು ದೊಡ್ಡದಾಗಿ ಭಾಷಣ ಮಾಡುತ್ತಿದ್ದಾರೆ. ದಶಕಗಳ‌ ಕಾಲ ಇವರೇ ಜಿಲ್ಲೆಯನ್ನ‌ ಆಡಳಿದರು ಮಾಡಲಾಗದ ಅಭಿವೃದ್ಧಿ ಆರು ತಿಂಗಳ ಒಳಗಾಗಿ ಮಾಡಲು ಸಾಧ್ಯವೇ ಎಂದು ಪ್ರಶ್ನೆ ಮಾಡುವಂತಾಗಿದೆ.