ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರಕನ್ನಡ(uttara Kannada)ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ನಂತರದಲ್ಲಿ(Congress) ಕಾಂಗ್ರೆಸ್ ಸಂಘಟನೆ ಕೊರತೆ ಉಂಟಾಗಿರುವ ಬಗ್ಗೆ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷರು ಹಾಗೂ ಶಿರಸಿ (Sirsi)ಸಿದ್ದಾಪುರದ ಶಾಸಕರಾಗಿರುವ ಭೀಮಣ್ಣ ನಾಯ್ಕ ಅವರು ಅಂಕೋಲಾದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲೇ ತೀವ್ರ ವಾಗ್ದಾಳಿ ನಡೆಸಿದ್ದರು.

ಪಕ್ಷ ಸಂಘಟನೆಯಲ್ಲಿ ಯಾವತ್ತು ಕೂಡ ರಾಜೀ ಅನ್ನುವುದು ಇಲ್ಲ.ಸಂಘಟನೆ ಮಾಡದಲು ಸಾಧ್ಯವಾಗದೆ ಇದ್ದರೆ ಆ ಹುದ್ದೆಯಲ್ಲಿ ಇರುವುದು ಪ್ರಯೋಜನವಿಲ್ಲ. ಇದುವರೆಗೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಬಗ್ಗೆ ಸಭೆ ಮಾಡಲಾಗಿದೆ ಎನ್ನುವ ಬಗ್ಗೆ ಲೆಕ್ಕ ಕೊಡಿ ಎಂದು ಪಕ್ಷದ ನಾಯಕರ ಎದುರ ಖಡಕ್ ಆಗಿ ಎಚ್ಚರಿಕೆ ನೀಡಿದ್ದರು.

ಜಿಲ್ಲಾಧ್ಯಕ್ಷರಿಂದ ಹಿಡಿದು ಬ್ಲಾಕ್ ಅಧ್ಯಕ್ಷರ ತನಕ ಸಂಘಟನೆಯ ಕೆಲಸ ಆಗುತ್ತಿಲ್ಲ.ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರದಲ್ಲಿ ಇದುವರೆಗೆ ಐದು ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿದ್ದೇವೆ. ಆದರೆ ಅದು ಜನರ ಮನೆ ಬಾಗಿಲಿಗೆ ಸರಿಯಾಗಿ ತಲುಪಿದೇಯಾ ಇಲ್ವಾ ಎನ್ನುವುದನ್ನ ಮೊದಲು ನೋಡಿ.ಒಂದು ವೇಳೆ ಸಿಗದೆ ಇದ್ದರೆ ಯಾವ ಕಾರಣಕ್ಕೆ ಸಿಕ್ಕಿಲ್ಲ ಎನ್ನುವ ಬಗ್ಗೆ ಪರಿಶೀಲನೆ ನಡೆಸಿ ಯೋಜನೆ ಬಡವರಿಗೆ ತಲುಪುವಂತೆ ಮಾಡಬೇಕಿದೆ.

ಕೇವಲ ಚುನಾವಣೆ ಬಂದಾಗ ಮಾತ್ರ. ಸಂಘಟನೆ ಎನ್ನುವುದು ಇರಬಾರದು ಸಂಘಟನೆ ನಿರಂತವಾಗಿ ಇರಬೇಕು. ನಾನು 13ವರ್ಷ ಜಿಲ್ಲೆಯ ಪ್ರತಿಯೊಬ್ಬರನ್ನ ವಿಶ್ವಾಸಕ್ಕೆ ತೆಗೆದುಕೊಡು ಪಕ್ಷ ಸಂಘಟನೆ ಮಾಡಿದ್ದೇ‌‌ನೆ. ಸಂಘಟನೆಯ ಜವಾಬ್ದಾರಿ ಹೊತ್ತಿರುವವರು ಮೊದಲು ಎಲ್ಲರ ವಿಶ್ವಾಸ ಗಳಿಸಿಕೊಳ್ಳುವ ಕೆಲಸ ಮಾಡಬೇಕು ಪಕ್ಷ ಸಂಘಟನೆ ವಿಚಾರದಲ್ಲಿ ಯಾರು ಕೂಡ ದೊಡ್ಡವರಲ್ಲ, ಎನ್ನುವ ಮೂಲಕ ಪಕ್ಷದ ಜಿಲ್ಲಾಧ್ಯಕ್ಷರಿಂದ ಹಿಡಿದು ಬ್ಲಾಕ್ ಬ್ಲಾಕ್ ಅಧ್ಯಕ್ಷರುಗಳು ಸಹ ಲೋಕಸಭಾ ಚುನಾವಣೆಯಲ್ಲಿ(Lok Sabha Elections)ಪಕ್ಷ ಸಂಘನೆಗೆ ಮುಂದಾಗುವಂತೆ ಸಲಹೆ ನೀಡಿದ್ದರು..