ಸುದ್ದಿಬಿಂದು ಬ್ಯೂರೋ
ಕಾರವಾರ
: ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರವಾರ ಬಳಿ ನಿರ್ಮಿಸಲಾಗಿರುವ ಟನಲ್ ನಲ್ಲಿ ಸೋರಿಕೆಯಾಗುತ್ತಿರುವುದರಿಂದ ಇಂದಿನಿಂದ ಎಲ್ಲಾ ವಾಹನಗಳ ಸಂಚಾರವನ್ನ ಸಂಪೂರ್ಣವಾಗಿ ಸ್ಥಗಿತ (Tunnel Traffic Bandh) ಮಾಡಲಾಗಿದೆ.

ನಿನ್ನೆ IRB ಮತ್ತು ರಾಷ್ಟ್ರೀಯ ಹೆದ್ದಾರಿ (National Highway 66) ಪ್ರಾಧಿಕಾರದ ಅಧಿಕಾರಿಗಳ ಜತೆ ಸಭೆ ನಡೆಸಿದ್ದ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಕಾರವಾರ ಶಾಸಕ ಸತೀಶ್ ಸೈಲ್. ಟನಲ್ ಒಳಗಿಂದ ನೀರು ಸೋರಿಕೆ ಆಗುತ್ತಿದೆ ಸುರಕ್ಷಿತ ವಾಗಿಲ್ಲ ಎಂಬ ದೂರು ಕೇಳಿಬಂದ ಹಿನ್ನಲೆ ಪಿಟ್ನೆಸ್ ಸರ್ಟಿಫಿಕೇಟ್ ‌ಇಲ್ಲದೆ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಸೂಚನೆ ನೀಡಿದ್ದರು.

ಇನ್ನೂ ಸುರಂಗ ಮಾರ್ಗ ಸೇರಿದಂತೆ ಹೆದ್ದಾರ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದ್ದು, ಟೋಲ್ ಶುಲ್ಕ.(Toll Collection)ವಸೂಲಿಯನ್ನ ಕೂಡ ನಿಲ್ಲಿಸಬೇಕು ಎಂದು ಐಆರ್ ಬಿ ಕಂಪನಿಯ ಆಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದರು. ಆದರೆ ಸದ್ಯ ಇಂದಿನಿಂದ ಟನಲ್ ನಲ್ಲಿ ಎಲ್ಲಾ ವಾಹನ ಸಂಚಾರವನ್ನ ಸಂಪೂರ್ಣವಗಿ ಬಂದ್ ಮಾಡಲಾಗಿದ್ದು, ಕಾರವಾರಕ್ಕೆ ಬರುವ ಹಾಗೂ ಹೋಗುವ ವಾಹನಗಳು ಈ ಮೊದಲು ಸಂಚರಿಸಿದಂತೆ ಬಿಣಗಾ ದಿಂದ ಬೈತಖೋಲ್ ಮಾರ್ಗವಾಗಿ ಸಂಚರಿಸಲಿದೆ.