ಸುದ್ದಿಬಿಂದು ಬ್ಯೂರೋ
ಕಾರವಾರ :
ಕಳೆದ ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ರಾ.ಹೆ. ಕಾಮಗಾರಿಯಿಂದ (National Highway 66 ) ಬೇಸರಗೊಂಡಿರುವ ಸಚಿವ ಮಾಂಕಾಳ್ ವೈದ್ಯ ಬಿಣಗಾದಲ್ಲಿ ನಿರ್ಮಿಸಲಾಗಿರುವ ಟನಲ್ ಸೋರಿಕೆ ಹಾಗೂ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗಿರುವುದರಿಂದ ಆಕ್ರೋಶಗೊಂಡಿದ್ದ ಸಚಿವರು ಹಟ್ಟಿಕೇರಿ, ಕುಮಟಾ ಹಾಗೂ ಶಿರೂರು ಟೋಲ್ ಪ್ಲಾಝಾದಲ್ಲಿ ಟೋಲ್ ಸಂಗ್ರಹ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದರು. ಆದರೆ ಐಆರ್ ಬಿ ಕಂಪನಿ ಇದುವರಗೆ ಶುಲ್ಕ ವಸೂಲಿ ನಿಲ್ಲಿಸದೆ ತನ್ನ ಹಠಮಾರಿ ಧೋರಣೆ ಮುಂದುವರೆಸಿದೆ.

ಕಾರವಾರ ಬಳಿ ನಿರ್ಮಿಸಲಾಗಿದ್ದ ಟನಲ್‌ ನಲ್ಲಿ (Tunnel) ಮಳೆಗಾಲ ಆರಂಭವಾಗುತ್ತಿದ್ದಂತೆ ಟನಲ್ ಸೋರಿಕೆ ಆಗುತ್ತಿದೆ.ಇದರಿಂದ‌ ಟನಲ್ ನಲ್ಲಿ ಅಪಾಯ ಎದುರಾಗಬಹುದು ಎಂದು ನಿನ್ನೆಯಿಂದ ಟನಲ್‌ನಲ್ಲಿ ವಾಹನಗಳ ಓಡಾಟವನ್ನ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಟನಲ್‌ಬಂದ್‌ಮಾಡಿ ಟೋಲ್ ನಲ್ಲಿ ವಾಹನ ಸವಾರಿಂದ ಶುಲ್ಕ ವಸೂಲಿ ಪಡೆಯದಂತೆ ಸೂಚನೆ ನೀಡಿದ್ದರೂ. ಇದಕ್ಕೆ ಸಾರ್ವಜನಿಕರು ಹಾಗೂ ವಾಹನ ಸವಾರರಿಂದ ವ್ಯಾಪಕ ಮೆಚ್ಚುಗೆ ಸಹ ವ್ಯಕ್ತವಾಗಿದೆ.

ಈ ಹಿಂದೆ ಇದ್ದ ಯಾವ ಜನಪ್ರತಿನಿಧಿಗಳು, ಸಹ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ಬಗ್ಗೆ ಧ್ವನಿ ಎತ್ತಿರಲಿಲ್ಲ. ಈ ಬಗ್ಗೆ ಕನ್ಮಡಪರ ಸಂಘಟನೆಗಳು ಆಗಾಗ ಧ್ಬನಿ ಎತ್ತಿದ್ದು,‌‌‌ ಇನ್ನೂ ಜೆಡಿಎಸ್ ಮುಖಂಡ‌‌ ಸೂರಜ್ ನಾಯ್ಕ ಸೋನಿ ಕೂಡ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ಬಗ್ಗೆ ಹೋರಾಟ ಮಾಡುತ್ತಲೆ‌‌ ಬಂದಿದ್ದಾರೆ‌.ಇವರು ಹೊನ್ನಾವರದಿಂದ ಕುಮಟ ತನಕ ನಡೆಸಿದ ಜನಜಾಗೃತಿ ಪಾದ ಯಾತ್ರೆಯಲ್ಲಿ ಟೋಲ್ ವಿಚಾರವನ್ನ ಸಹ ಪ್ರಮುಖ ವಿಚಾರವಾಗಿ ಇಟ್ಟು)ಕೊಂಡು ಪಾದಯಾತ್ರೆ ಮಾಡಿದ್ದರು.

ನನ್ನ ಮಾತಿನಲ್ಲಿ ಬದಲಾವಣೆ ಇಲ್ಲ : ಮಂಕಾಳು ವೈದ್ಯ
ನನ್ನ ಮಾತಿನಲ್ಲಿ ಯಾವುದೆ ಬದಲಾವಣೆ ಇಲ್ಲ. ಜನರಿಗೆ ಸಮಸ್ಯೆ ಆಗುತ್ತಿರುವುದನ್ನ ನೋಡಿ ಕಣ್ಣಮುಚ್ಚಿ‌ಕೊಳ್ಳುವ ಸಚಿವ ನಾನಲ್ಲ. ಈ ಹೆದ್ದಾರಿ ಕಾಮಗಾರಿ ಆರಂಭವಾಗಿ ಹತ್ತುವರ್ಷ ಆಗತ್ತಾ ಇದೆ. ಇನ್ನೂ ಕಾಮಗಾರಿ ಪೂರ್ಣವಾಗಿಲ್ಲ. ಆಗಿರುವ ಕಾಮಗಾರಿ ಸಹ ಸರಿಯಾಗಿಲ್ಲ.ಪ್ರತಿನಿತ್ಯ ಹೆದ್ದಾರಿಯಲ್ಲಿ ಓಡಾಡುವ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.ಕಾಮಗಾರಿ ಸಮರ್ಪಕವಾಗಿ ಮಾಡದೆ ಟೋಲ್ ಆರಂಭಿಸಿರುವುದಕ್ಕೆ ನನ್ನ ವಿರೋಧ ಇದೆ. ಹೀಗಾಗಿ ಸಮಸ್ಯೆ ಬಗೆ ಹರಿಯುವ ತನಕ ಜನರಿಗಾಗಿ ನನ್ನ ಹೋರಾಟ ಮುಂದುವರೆಯಲಿದೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.