ಸುದ್ದಿಬಿಂದು ಬ್ಯೂರೋ
ಕಾರವಾರ : ಈ ಬಾರಿಯ ಮುಂಗಾರು ವಿಳಂಬವಾದರೂ ಕರ್ನಾಟಕ ಕರಾವಳಿಯ ಭಾಗದ ಹಲವು ನದಿಗಳು ಭಾರೀ ಮಳೆಯಿಂದಾಗಿ (Heavy rain) ತುಂಬಿ ಹರಿಯುತ್ತಿವೆ. ಈ ನಡುವೆ ಮುಂದಿನ 5 ದಿನಗಳ ಕಾಲ ಕರಾವಳಿಯ ಕೆಲವು ಪ್ರತ್ಯೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ 32 (India Meteorological Department) ಎಚ್ಚರಿಕೆ ನೀಡಿದೆ.
ಕರಾವಳಿ ಜಿಲ್ಲೆಗಳಾದ ವಿಶೇಷವಾಗಿ ಉತ್ತರಕನ್ನಡ (Uttara Kannada) ದಕ್ಷಿಣ ಕನ್ನಡ (Dakshina Kannada) ಹಾಗೂ ಉಡುಪಿ (Udupi) ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ (Yellow Alert) ಘೋಷಿಸಲಾಗಿದ್ದು, ಜುಲೈ 15 ರವರೆಗೆ ಭಾರೀ ಮಳೆ ನಿರೀಕ್ಷಿಸಲಾಗಿದೆ.
ನಿನ್ನೆ ಬೆಳಗ್ಗೆ 8.30ಕ್ಕೆ ದಾಖಲಾಗಿರುವ ಮಾಹಿತಿಯ ಪ್ರಕಾರ ಇಡೀ ಕರ್ನಾಟಕದಲ್ಲೇ ಗರಿಷ್ಠ ಮಳೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಆಗಿದೆ. ಇಲ್ಲಿ 15 ಸೆಂಟಿ ಮೀಟರ್ ಮಳೆಯಾಗಿದೆ.ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ 12 ಸೆಂಟಿ ಮೀಟರ್, ಕದ್ರಾದಲ್ಲಿ 10 ಆ ನಂತರ , ಸುಳ್ಯ 8, ಕ್ಯಾಸಲ್ ರಾಕ್, ಮಂಗಳೂರು ವಿಮಾನ ನಿಲ್ದಾಣ, ಧರ್ಮಸ್ಥಳ, ಮಣಿ, ಪಣಂಬೂರಿನಲ್ಲಿ ತಲಾ 7ಸೆಂಟಿ ಮೀಟರ್ ಮಳೆಯಾಗಿದೆ.