ಪ್ರತಿಭಾರಿಯು ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣುವ ಅನಂತ್ ಕುಮಾರ್ ಹೆಗಡೆ ಅವರ ಬಗ್ಗೆ ಕೆನರಾ ಲೋಕಸಭಾ ಕ್ಷೇತ್ರದ ಮತದಾರರು ಎಚ್ಚರಿಕೆ ವಹಿಸಬೇಕು. ಪ್ರತಿಭಾರಿಯು ಚುನಾವಣೆ ಸಂಧರ್ಭದಲ್ಲಿ ಬೊಬ್ಬೆ ಹೊಡೆಯುವ ಅನಂತ್ ಕುಮಾರ್ ಹೆಗಡೆಯವರಿಗೆ ಬೇರೆ ಸಮಯದಲ್ಲಿ ಹಿಂದೂ ಧರ್ಮ ನೆನಪಿಗೆ ಬರುವುದಿಲ್ಲ..

ಮತ್ತೆ ಟಿಕೆಟ್ ಸಿಗುತ್ತದೆ ಎಂಬ ಹುಮ್ಮಸ್ಸಿನಿಂದ ಜನರನ್ನ ಮರಳು ಮಾಡಲು ನಾಲ್ಕುವರೆ ವರ್ಷದ ನಂತರ ಬಂದ ಸಂಸದರು ಮಸೀದಿ ಒಡೆಯುವ ಬೆದರಿಕೆ ಹಾಕಿ ಟಿಕೆಟ್ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದರು, ಮುಂದುವರಿದ ಭಾಗವಾಗಿ ಬಿಜೆಪಿ ಬಹುಮತ ಬಂದರೆ ಸಂವಿಧಾನ ಬದಲಿಸಲು ಅನುಕೂಲ ಎಂಬ ಹೇಳಿಕೆ ನೀಡಿದರು.ತದನಂತರ ಮಾಯವಾಗಿದ್ದಾರೆ.

ಆದರೆ ಅನಂತ್ ಕುಮಾರ್ ಹೆಗಡೆ ಅವರಿಗೆ ಶೋಷಿತರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಕಾರಣ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತೆ ಎಂಬ ಸತ್ಯವನ್ನು ಜನರಿಗೆ ತಿಳಿಸಿದಕ್ಕೆ.

ನಮ್ಮ ಲೋಕಸಭಾ ಕ್ಷೇತ್ರದ ಮತದಾರರು ಯಾವುದೇ ಪ್ರಚೋದನೆಗಳಿಗೆ ಒಳಗಾಗದೆ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಗೆಲ್ಲಿಸಲೇಬೇಕು, ಇಲ್ಲವಾದಲ್ಲಿ ಮತ್ತೊಂದು ಭೀಮಾ ಕೊರೆಗಾಂವ್ ನಂತಹ ಹೋರಾಟಗಳನ್ನು ಎದುರಿಸಿ ಪುನಃ ನ್ಯಾಯ ಪಡೆಯುವಂತಹ ಸಂದೀಗ್ದ ಪರಿಸ್ಥಿತಿಯನ್ನು ಬಿಜೆಪಿಯವರು ತಂದೊಡುತ್ತಾರೆ.