ಸುದ್ದಿಬಿಂದು ಬ್ಯೂರೋ
ಗೋಕರ್ಣ :ಉತ್ತರಕನ್ನಡ(Uttarkannada) ಜಿಲ್ಲೆಯ ಗೋಕರ್ಣದ ಮುಖ್ಯ ಕಡಲತೀರದಲ್ಲಿ(Gokarna Beach)ಸಮುದ್ರದಲ್ಲಿ ಮುಳುಗಡೆಯಾಗುತ್ತಿದ್ದ ಒಂದೇ ಕುಟುಂಬದ 7ಮಂದಿ ಸೇರಿ 8ಮಂದಿ ಪ್ರವಾಸಿಗರನ್ನ (Tourists)ರಕ್ಷಣೆ ಮಾಡಿರುವ ಘಟನೆ ನಡೆದಿದೆ.

ಹುಬ್ಬಳ್ಳಿಯಿಂದ (Hubli)ಒಂದೇ ಕುಟುಂಬದ ಏಳು ಮಂದಿ ಗೋಕರ್ಣ ಪ್ರವಾಸಕ್ಕೆ ಬಂದಿದ್ದು, ಈ ವೇಳೆ ಸಮುದ್ರದಲ್ಲಿ ಈಜಲು ಹೋಗಿದ್ದು,‌ಎಲ್ಲರೂ ಸಹ ಸಮುದ್ರಲ್ಲಿ‌ ಮುಳುಗಡೆಯಾಗಿದ್ದರು.ಇನ್ನೂ ಮತ್ತೋರ್ವ ವ್ಯಕ್ತಿ ಹುಬ್ಬಳ್ಳಿಯಿಂದ ಪಿಂಡ ಪ್ರಧಾನ ಮಾಡಲು ಬಂದಿದ್ದ ಎಲ್ ವಿ ಪಾಟೀಲ್ (30) ರಕ್ಷಣೆ ಮಾಡಲಾಗಿದೆ.

ಒಂದೇ ಕುಟುಂಬದವರಾದ ಪರಶುರಾಮ(44), ರುಕ್ಮಿಣಿ(38),ಧೀರಜ್(14),ಅಕ್ಷರ(14)ಖುಷಿ(13),ದೀಪಿಕಾ(12)ನಂದ ಕಿಶೋರ(10) ಸಮುದ್ರದಲ್ಲಿ ಮುಳುಗಡೆಯಾಗಿದ್ದರು.
ಲೈಪ್ ಗಾರ್ಡ್ ಸಿಬ್ಬಂದಿಗಳಾದ ಶಿವಪ್ರಸಾದ ಅಂಬಿಗ, ಲೋಕೇಶ್ ಹರಿಕಾಂತ ಎಲ್ಲಾ‌ ಎಂಟು ಮಂದಿಯನ್ನ‌ರಕ್ಷಣೆ‌ ಮಾಡಿದ್ದಾರೆ.