ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ : ದುರಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ದ್ವಿಚಕ್ರ ವಾಹನವೊಂದು ದಗದಗನೆ ಹೊತ್ತಿ ಉರಿದ ಘಟನೆ ದಮನಗರದ ಸೋಮಾನಿ ವೃತ್ತದ ಹತ್ತಿರ ಮಂಗಳವಾರ ಸಂಜೆ ನಡೆದಿದೆ.
ಸ್ಥಳೀಯ ಟೌನಶಿಪ್ ನಿವಾಸಿಯೊಬ್ಬರು ಸೋಮಾನಿ ವೃತ್ತದ ಹತ್ತಿರವಿರುವ ಅಶೋಕ್ ಮೇಸ್ತ್ರಿಯವರ ಗ್ಯಾರೇಜಿಗೆ ದುರಸ್ತಿಗೆಂದು ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ತಂದಿದ್ದರು. ಮೆಕಾನಿಕ್ ಅಶೋಕ್ ಮೇಸ್ತ್ರಿ ಅವರು ದುರಸ್ತಿ ಮಾಡುವ ಸಂದರ್ಭದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
ತಕ್ಷಣವೇ ಸ್ಥಳೀಯರು ಬೆಂಕಿ ನಂದಿಸಲು ಸಹಕರಿಸಿದರು. ಸ್ಥಳಕ್ಕೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದ ವಾಹನ ದೌಡಾಯಿಸಿ ಬೆಂಕಿಯನ್ನು ನಂದಿಸಿತು.ಆದರೆ ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ.
ಗಮನಿಸಿ