ಸುದ್ದಿಬಿಂದು ಬ್ಯೂರೋ ವರದಿ
ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ 21 ಅಕ್ಟೋಬರ್ 2024ರಂದು ಪೊಲೀಸ್ ಹುತಾತ್ಮ ಸಂಸ್ಮರಣಾ ದಿನಾಚರಣೆಯ ಪ್ರಯುಕ್ತ ಹುತಾತ್ಮ ಪೊಲೀಸರಿಗೆ ಗೌರವ ಅರ್ಪಿಸುವ ಕಾರ್ಯ ನಡೆಯಿತು.
ಸಮಾಜದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುವ ಸತ್ಕಾರ್ಯ ಇದಾಗಿತ್ತು. ಈ ಕಾರ್ಯದಲ್ಲಿ ನಮ್ಮ ನಾಮಧಾರಿ ಸಮಾಜದ ಯುವ ಧುರೀಣ, ಕುಮಟಾ ತಾಲೂಕಿನ ಧಾರೇಶ್ವರ ಪಂಚಾಯತದ ಆಜೀವ ಸದಸ್ಯರೆಂದೇ ಖ್ಯಾತರಾದ ಶ್ರೀ ಎಸ್. ಟಿ. ನಾಯ್ಕರು ಭಾಗಿಯಾಗಿದ್ದರು. ಇದು ಎಲ್ಲರಿಗೂ ಸಿಗುವ ಅವಕಾಶವಲ್ಲ. ಜಿಲ್ಲೆಯ ಸನ್ಮಾನ್ಯ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ ಅವರು ಈ ಕಾರ್ಯಕ್ರಮದಲ್ಲಿ ಎಸ್. ಟಿ. ನಾಯ್ಕರು ಇದ್ದಾರೆ ಎನ್ನುವುದನ್ನು ಗುರುತಿಸಿ ಅವರಿಗೆ ಈ ಅವಕಾಶ ನೀಡಿದ್ದಾರೆ. ಇದು ಸ್ನೇಹ ಜೀವಿ ಆಗಿರುವ ಎಸ್. ಟಿ. ನಾಯ್ಕರ ಸ್ನೇಹಮಯ ವ್ಯಕ್ತಿತ್ವವನ್ನು ತೋರಿಸುತ್ತದೆ.
ನಮ್ಮ ನಾಮಧಾರಿ ಸಮಾಜದ ಅನೇಕರು ರಾಜ್ಯಾದ್ಯಂತ ಪೊಲೀಸ್ ಸೇವೆಯಲ್ಲಿದ್ದಾರೆ. ಅವರೆಲ್ಲರ ಶ್ರಮವನ್ನೂ ಈ ಸಂದರ್ಭ ಕುಮಟಾ ನಾಮಧಾರಿ ಸಂಘ ಸ್ಮರಿಸುತ್ತದೆ.
ಗಮನಿಸಿ