ಸುದ್ದಿಬಿಂದು ನ್ಯೂಸ್ ಡೆಸ್ಕ್
ಕುಮಟಾ : ನಾಳೆ ಯುವ ಜೆಡಿಎಸ್ ಬೃಹತ್ ಬೈಕ್ ರ‌್ಯಾಲಿ ಹಾಗೂ ಸಮಾವೇಶ ನಾಳೆ ಗೋಕರ್ಣ ಭಾಗದಲ್ಲಿ
ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಅವರ ಪರ ಅವರ ಅಭಿಮಾನಿಗಳು ಹಾಗೂ ಜೆಡಿಎಸ್ ನ ಸಾವಿರಾರು ಕಾರ್ಯಕರ್ತರು ಬೈಕ್ ರ‌್ಯಾಲಿ ಹಾಗೂ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನೂ ಜೆಡಿಎಸ್ ಅಭ್ಯರ್ಥಿ ಆಗಿರುವ ಸೂರಜ್ ನಾಯ್ಕ ಸೋನಿ, ಜೆಡಿಎಸ್ ತಾಲೂಕಾಧ್ಯಕ್ಷ ಸಿ ಜೆ ಹೆಗಡೆ, ಮುಖಂಡರಾದ ಜಿ ಕೆ ಪಟಗಾರ, ಹಾಲಕ್ಕಿ ಸಮುದಾಯ ಬಲಿಂದ್ರ ಗೌಡ, ಮೀನುಗಾರರ ಮುಖಂಡರು ಸೇರಿ ಅನೇಕರು ಬೈಕ್ ರ‌್ಯಾಲಿ ಹಾಗೂ ಸಮಾವೇಶದಲ್ಲಿ ಬಾಗಿಯಾಗಲಿದ್ದಾರೆ.
ಬೈಕ್ ರ‌್ಯಾಲಿಗೆ ನಾಳೆ ರವಿವಾರ ಬೆಳಿಗ್ಗೆ 11ಗಂಟೆಗೆ ಸಾಣಿಕಟ್ಟಾದಿಂದ ಆರಂಭವಾಗಿ ಮೂಡಂಗಿ,ತದಡಿ,ಬೆಲೆಗದ್ದೆ,ಬೇಲೆಕಾನ ಮಾರ್ಗವಾಗಿ ಸಂಚರಿಸಿ ಗೋಕರ್ಣದ ಅಶೋಕೆಯಲ್ಲಿ ಸಮಾವೇಶಗೊಳ್ಳಲಿದೆ.
ಅಶೋಕೆಯ ಹಾರುಬೀರ ಯುವಕ ಸಂಘ ರಂಗಮಂದಿರದಲ್ಲಿ ಸಮಾವೇಶ ನಡೆಯಲಿದೆ.