ಸುದ್ದಿ ಬಿಂದು ನ್ಯೂಸ್ ಡೆಸ್ಕ್

ಕಾರವಾರ : ಶಾಸಕಿ ರೂಪಾಲಿ ನಾಯ್ಕ ಇಂದು ನಗರದ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಮೀನುಗಾರ ಮಹಿಳೆಯರ ಅಹವಾಲು ಆಲಿಸಿ ಪರಿಹಾರ ಒದಗಿಸುವುದಾಗಿ ಶಾಸಕಿ ರೂಪಾಲಿ ನಾಯ್ಕ ಭರವಸೆ ನೀಡಿದ್ದರು.

ಮೀನುಗಾರ ಮಹಿಳೆಯರು ಕಷ್ಟಪಟ್ಟು ದಿನವಿಡಿ ವ್ಯಾಪಾರ ಮಾಡಿ, ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.ಮೀನುಗಾರ ಮಹಿಳೆಯ ಸಮಸ್ಯೆ ನನ್ನ ಗಮನಕ್ಕಿದೆ. ಈ ಮಹಿಳೆಯರು ಸ್ವಾವಲಂಬಿಗಳಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ.ಮುಂದಿನ‌ ದಿನದಲ್ಲಿ ಮೀನುಗಾರರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದ್ದರು.

ಶಾಸಕರು ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಸಮಯದಲ್ಲಿ ಅಲ್ಲಿನ ಮೀನುಗಾರ ಮಹಿಳೆಯರು ಮಾರುಕಟ್ಟೆಯಲ್ಲಿನ ಸಮಸ್ಯೆಗಳನ್ನು ಗಮನಕ್ಕೆ ತಂದರು. ಅದಕ್ಕೆ ಸ್ಪಂದಿಸಿದ ಶಾಸಕಿ ರೂಪಾಲಿ ನಾಯ್ಕ,

ಮೀನು ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಮಾಡುವ ವೇಳೆ ಕುಳಿತುಕೊಳ್ಳಲು ಸರಿಯಾದ ಆಸನ ಇಲ್ಲದೆ ಇರಿವುದನ್ನ ಗಮನಿಸಿದ ಶಾಸಕರು ಮಹಿಳೆಯರಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಮಾಡಲಾಗುವುದು. ಮಳೆಗಾಲದಲ್ಲಿಯೂ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.