ಸುದ್ದಿಬಿಂದು ಬ್ಯೂರೋ
ಅಂಕೋಲಾ : ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರೂ ಯುವಕರು ಗಾಯಗೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಕಾರವಾ ರಸ್ತೆಯಲ್ಲಿ ನಡೆದಿದೆ.
ಘಟನೆಯಲ್ಲಿ ಹೊಸಕಂಬಿಯ ನಿವಾಸಿ ವಿಶ್ವನಾಥ ಆಗೇರ ಹಾಗೂ ಆತನ ಸ್ನೇಹಿತ ಇಬ್ಬರೂ ಗಾಯಗೊಂಡಿದ್ದರು, ಬೈಕ್ ಸವಾರರು ತಮ್ಮ ಬೈಕ ಅತಿವೇಗವಾಗಿ ಚಲಿಸಿಕೊಂಡು ಹೋಗಿ ನಿಯಂತ್ರಣ ಸಿಗದೆ,ರಸ್ತೆ ಬದಿಯ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದಿದೆ.ಇದರಿಂದಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು,
ತಕ್ಷಣ ಇಬ್ಬರನ್ನ ಅಂಕೋಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು, ಆದರೆ ಗಂಭೀರವಾಗಿ ಗಾಯಗೊಂಡಿದ್ದು ಹೀಗಾಗಿ ಇಬ್ಬರನ್ನ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಕ್ರಿಮ್ಸ್ ಗೆ ರವಾನಿಸಲಾಗಿದೆ. ಅಪಘಾತವಾಗಿರುವ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.