ಕಾರ್ಕಳ : ಪ್ರೀಯಕರನಿಗಾಗಿ ಮಹಿಳೆ ಓರ್ವಳು ಕಟ್ಟಿಕೊಂಡ ತನ್ನ ಗಂಡನಿಗೆ ವಿಷ ಊಣಿಸಿ ಕೊಲೆ‌ ಮಾಡಿರುವ ಘಟನೆ‌ ಅಜೆಕಾರು ದೆಪ್ಪುತ್ತೆ ಎಂಬಲ್ಲಿ ವರದಿಯಾಗಿದೆ.

ಬಾಲಕೃಷ್ಣ ಎಂಬಾತನೆ ಪತ್ನಿ ನೀಡಿದ ವಿಷ ಸೇವನೆ ಮಾಡಿ‌ ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದಾನೆ. ಈತನ ಪತ್ನಿ‌ ಪ್ರತಿಮಾ‌ ಎಂಬಾಕೆ‌ ಪ್ರೀಯಕರನ ಜೊತೆ ಸೇರಿಕೊಂಡು ಕಟ್ಟಿಕೊಂಡಿಕೊಂಡ‌ ಗಂಡನಿಗೆ ತನ್ನ ಕೈಯಿಂದ ವಿಷ ನೋಡಿ ಕೊಲೆ‌ ಮಾಡಿದ್ದಾಳೆ. ಪ್ರೀಯಕರನಾಗಿರುವ ದಿಲೀಪ್ ಎಂಬಾತ ಸಹ ಕೊಲೆ ಆರೋಪಿತನಾಗಿದ್ದಾನೆ.

ಕೊಲೆಯಾದ ಬಾಲಕೃಷ್ಣ ಪತ್ನಿ ಪ್ರತಿಮಾ ಸದಾ ರೀಲ್ಸ್ ಮಾಡುವ ಆಶಕ್ತಿ ಹೊಂದಿದ್ದು, ಆಗಾಗ ರೀಲ್ಸ್ ಮಾಡಿ ಸಾಮಾಜಿಕ ಫೇಸ್ಬುಕ್, ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಳು ಎನ್ನಲಾಗಿದೆ. ಈ ವೇಳೆ ದಿಲೀಪ್ ಎಂಬಾತ ಆಕೆಗೆ ಪರಿಚಿತನಾಗಿದ್ದ ಎನ್ನಲಾಗಿದ್ದು.ಪರಿಚಯ ಪ್ರೀತಿಗೆ ತಿರುಗಿತ್ತು ಎನ್ನಲಾಗಿದ್ದು, ಈ ವಿಚಾರ ಆಕೆಯ ಪತಿಗೂ ಕೂಡ ಗೊತ್ತಾಗಿದ್ದು,ಇದು ಅವರಿಬ್ಬರ ಪ್ರೀತಿಗೆ ಪತಿ ಬಾಲಕೃಷ್ಣ ಅಡ್ಡಿಯಾಗಿದ್ದ,

ಹೀಗಾಗಿ ಪ್ರೀಯಕತ ದಿಲೀಪ್ ಹಾಗೂ ಬಾಲಕೃಷ್ಣ ಪತ್ನಿ ಪ್ರತಿಮಾ ಸೇರಿ ಬಾಲಕೃಷ್ಣಗೆ ವಿಷ ನೀಡಿದ್ದರು. ಬಳಿಕ ಆತನಿಗೆ ಬೆಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಗುಣಮುಖರಾಗಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಮನೆಯಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಮನಿಸಿ