ಸುದ್ದಿಬಿಂದು ಬ್ಯೂರೋ ವರದಿ
Mumbai:ಮುಂಬೈ : ಮಹಾರಾಷ್ಟ್ರ ಮತ್ತು ಕರ್ನಾಟಕದ ಸಂಬಂಧ ಅನೋನ್ಯವಾಗಿದೆ.ಈ ಸಂಬಂಧ ಇನ್ನು ದೃಢವಾಗಿ ಮುಂದುವರೆಯಬೇಕಾಗಿದ್ದರೆ ಭ್ರಷ್ಟ ಸರ್ಕಾರ ತೊಲಗಿ ಒಳ್ಳೆ ಸರ್ಕಾರ ಬರಲು ಮಹಾರಾಷ್ಟ್ರ ವಿಕಾಸ ಆಗಡಯನ್ನು ಆಯ್ಕೆ ಮಾಡಿ ಎಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಮಹಾರಾಷ್ಟ್ರದಲ್ಲಿ ಬಿಜೆಪಿ ಶಿಂಧೆ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಶಿಂಧೆ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜಲಯುಕ್ತ ಶಿವರ ಯೋಜನೆಯಲ್ಲಿ ಹತು ಸಾವಿರ ಕೋಟಿ ಹಗರಣ ಮತ್ತು ಆಂಬ್ಯುಲೆನ್ಸ್ ಖರೀದಿಯಲ್ಲಿ ಏಟು ಸಾವಿರ ಕೋಟಿ ಹಗರಣ ಮಾಡಿದೆ.ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಮಹಾರಾಷ್ಟ್ರ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬಹಿರಂಗವಾಗಿ ಡ್ರಗ್ಸ್ ಮಾರಾಟವಾಗುತ್ತಿದ್ದು,ಯುವಕರು ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಲೇವಾದೇವಿಗಾರರ ಸರ್ಕಾರವಾಗಿದೆ.

ಮುಂಬೈ ಕನ್ನಡಿಗರಲ್ಲಿ ಮಹಾರಾಷ್ಟ್ರ ವಿಕಾಸ್ ಆಕಾಡಿಗೆ ಮತ ನೀಡಬೇಕೆಂದು ಪ್ರಾರ್ಥಿಸುತ್ತೇನೆ ಕರ್ನಾಟಕ ಮಲ್ಲ ಪತ್ರಿಕೆಗೆ (Karnataka Malla)ನೀಡಿದ ವಿಶೇಷ ಸಂದರ್ಶನದಲ್ಲಿ ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಮಹಾವಿಕಾಸ ಅಘಾಡಿಗೆ ಅನುಕೂಲಕರ ವಾತಾವರಣವಿದ್ದು, ಮಾವಿಯಾ ಸರ್ಕಾರ ರಚಿಸಲಿದ್ದಾರೆ ಎಂಬ ವಿಶ್ವಾಸವನ್ನೂ ಜಿ ಪರಮೇಶ್ವರ ವ್ಯಕ್ತಪಡಿಸಿದ್ದಾರೆ.ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ 5 ಭರವಸೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದ್ದು, ಕರ್ನಾಟಕದಲ್ಲಿ ಲಕ್ಷಾಂತರ ಜನರು ಈ ಭರವಸೆಗಳ ಲಾಭ ಪಡೆಯುತ್ತಿದ್ದಾರೆ.
ಈ 5 ಭರವಸೆಗಳಿಗೆ ಕರ್ನಾಟಕ ಸರ್ಕಾರ ಬಜೆಟ್‌ನಲ್ಲಿಯೇ 56 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿರುವುದರಿಂದ ಹಣದ ಕೊರತೆಗೆ ಕಾರಣವಿಲ್ಲ ಎಂದು ಸಮಜಾಯಿಷಿ ನೀಡುವ ಮೂಲಕ ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ಕಾಂಗ್ರೆಸ್ ನ 5 ಭರವಸೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.

ಈ ಖಾತರಿಗಳ ಅನುಷ್ಠಾನವನ್ನು ಪರಿಶೀಲಿಸಲು ಅವರು ಕರ್ನಾಟಕಕ್ಕೆ ಬಂದಲಿ ಸ್ವಾಗತಾರ್ಹ ಎಂದು ಕರ್ನಾಟಕ ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.ಮಾಜಿ ಸಚಿವ ಸುರೇಶ್ ಶೆಟ್ಟಿ, ಮತ್ತು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗಮನಿಸಿ