suddibindu.in
Kumta: ಕುಮಟಾ :ದಿನದಿಂದ ದಿನಕ್ಕೆ ಲೋಕಸಭಾ ಚುನಾವಣಾ ಕದನಕಣ ರಂಗೇರುತ್ತಿದೆ. ಕಾಂಗ್ರೆಸ್ಸಿನಿಂದ ಡಾ. ಅಂಜಲಿ ನಿಂಬಾಳ್ಕರ್ ಹಾಗೂ ಬಿಜೆಪಿಯಿಂದ ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕಣದಲ್ಲಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ಸಿನಲ್ಲಿ ಉಂಟಾಗಿರುವ ಗುಂಪುಗಾರಿಕೆಯಿಂದಾಗಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗಲಿದೆಯೇ ಎನ್ನುವ ಆತಂಕ ಕಾರ್ಯಕರ್ತರಲ್ಲಿ ಮೂಡಿದೆ.

ಹೌದು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದೇ ಹೇಳಲಾಗುತ್ತಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ದುಡಿದ 10ಕ್ಕೂ ಹೆಚ್ಚು ಟಿಕೆಟ್ ಆಕಾಂಕ್ಷಿಗಳಿದ್ದರೂ ಸಹ ಕಾಂಗ್ರೆಸ್ ಹೈಕಮಾಂಡ್ ಸ್ಥಳೀಯರ `ಕೈ’ ಬಿಟ್ಟು ಕ್ಷೇತ್ರಕ್ಕೆ ಹೊಸಬ'' ಹಾಗೂ ಕ್ಷೇತ್ರದ ಬಗ್ಗೆ ಅರಿವೇ ಇಲ್ಲದಿರುವವರಿಗೆ ಟಿಕೆಟ್ ನೀಡಿತ್ತು. ಟಿಕೆಟ್ ಪಡೆದು ಕಣಕ್ಕಿಳಿದಹೊಸ ಅಭ್ಯರ್ಥಿ” ಚುನಾವಣಾ ಫಲಿತಾಂಶ ಹೊರಬಿದ್ದಾಗ ರಾಜ್ಯದಲ್ಲೇ ಹೀನಾಯವಾಗಿ ಸೋಲುವ ಮೂಲಕ ಠೇವಣಿ ಕಳೆದುಕೊಂಡಿದ್ದು ಈಗ ಇತಿಹಾಸ.

ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಠೇವಣಿ ಕಳೆದುಕೊಂಡ ಬಳಿಕವಾದರೂ ಈ ಹೊಸ ಅಭ್ಯರ್ಥಿ'' ಎಚ್ಚರಗೊಳ್ಳಬೇಕಿತ್ತು. ಆದರೆ ಕಳೆದುಕೊಂಡ ಸಂಪನ್ಮೂಲವನ್ನುಟ್ರಾನ್ಸ್ಫರ್ ದಂಧೆ” ಮೂಲಕ ಪುನರ್ ಕ್ರೋಡಿಕರಿಸುವ ಕಾರ್ಯ ಆರಂಭಿಸಿದ್ದು, ಇದು ಕ್ಷೇತ್ರದ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.

ಈ ವರ್ಗಾವಣೆ ದಂಧೆಯಲ್ಲಿ ಇಂತಿಂಥ ಹುದ್ದೆಗೆ ಇಂತಿಷ್ಟು ಲಕ್ಷ ರೂಪಾಯಿ ಲಂಚ ನಿಗದಿ ಮಾಡಲಾಗಿದೆ. ಇಷ್ಟು ಕೊಟ್ಟು ಬಂದ ನಂತರ ನಾವು ಬಂಡವಾಳ ವಾಪಾಸ್ ತೆಗೆಯುವುದಾದರೂ ಹೇಗೆ ಎಂಬ ಚಿಂತೆ ಅಧಿಕಾರ ವರ್ಗದವರನ್ನು ಕಾಡಲಾರಂಭಿಸಿದೆ ಎಂಬ ಮಾತು ಸರ್ಕಾರಿ ಕಚೇರಿಗಳ ಪಡಸಾಲೆಯಿಂದ ಕೇಳಿ ಬರುತ್ತಿದೆ.

ಆದರೂ ಎಚ್ಚೆತ್ತುಕೊಳ್ಳದ “ಹೊಸ ಅಭ್ಯರ್ಥಿ” ಇದೀಗ ಲೋಕಸಭಾ ಚುನಾವಣೆಯಲ್ಲಿ ಗುಂಪುಗಾರಿಕೆ ಮಾಡಿ ಪಕ್ಷದ ಅಭ್ಯರ್ಥಿಗೆ ಹಿನ್ನಡೆ ಉಂಟಾಗುವಂತೆ ಮಾಡುತ್ತಿದ್ದಾರೆಂದು ಪಕ್ಷದ ಕಾರ್ಯಕರ್ತರೇ ಪರಸ್ಪರ ಚರ್ಚಿಸುತ್ತಿದ್ದಾರೆ.

ಆಳುವ'' ಆಸೆ ಮಾತ್ರ ಹೊಂದಿದ್ದು, ಕ್ಷೇತ್ರದ ಜನರೊಂದಿಗೆನಿವೇದನೆ”ಯೇ ಗೊತ್ತಿಲ್ಲದ ಈ ಹೊಸ ಅಭ್ಯರ್ಥಿ'' ಈ ಕ್ಷೇತ್ರಕ್ಕೆ ಬಂದು ಹೋಗುವ ಕಾರ್ಯ ಮಾತ್ರ ಮಾಡುತ್ತಿರುವ ಕಾರಣ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎನ್ನುವ ಅರಿವುಹೊಸ ಅಭ್ಯರ್ಥಿ”ಗೆ ಇರುವುದಿಲ್ಲ. ಕ್ಷೇತ್ರದ ಕಾಂಗ್ರೆಸ್ ಆಯಾಕಟ್ಟಿನ ಜಾಗದಲ್ಲಿ ನಿರ್ದಿಷ್ಟ ಸಮುದಾಯದ ಈತನ ಚೇಲಾಗಳೇ ಕೂತಿರುವ ಕಾರಣ ಪಕ್ಷ ಸಂಘಟನೆ ಕೂಡ ಅಚ್ಚುಕಟ್ಟಾಗಿ ನಡೆಯುತ್ತಿಲ್ಲ ಎನ್ನುವ ಕೊರಗು ಹಿರಿಯ ಕಾರ್ಯಕರ್ತರದಾಗಿದೆ.

ಈ ಹಿಂದೆ ಕಾಂಗ್ರೆಸ್ಸಲ್ಲಿ ಶಾರದಾ ಶೆಟ್ಟಿ ಇದ್ದ ಸಂದರ್ಭ ಅವರು ಹಳ್ಳಿ-ಹಳ್ಳಿಗೆ ತೆರಳಿ, ಕೇರಿ-ಕೇರಿಗೆ ಹೋಗಿ ಪಕ್ಷವನ್ನು ಕೂಡಿಸುವ, ಜೋಡಿಸುವ ಕೆಲಸ ಮಾಡಿದ್ದರು. ಬಿಜೆಪಿ ಏಟಿಗೆ ಕಾಂಗ್ರೆಸ್ ಗ್ರಾಮೀಣ ಮಟ್ಟದಿಂದಲೂ ತಿರುಗೇಟು ನೀಡುವಷ್ಟು ಪಕ್ಷ ಬಲಿಷ್ಟವಾಗಿತ್ತು. ಆದರೆ ಈಗಿನ `ಹೊಸ ಅಭ್ಯರ್ಥಿ'' ಬರೀ ಎಸಿ ಕಾರಲ್ಲಿ ಕೂತು ದರ್ಬಾರು ಮಾಡುವುದೇ ಆಗಿದೆ ಎಂದುಕೈ’ ಪಕ್ಷದ ಹಿರಿಯ ಕಾರ್ಯಕರ್ತರೇ ನೊಂದು ನುಡಿಯುತ್ತಿದ್ದಾರೆ.

ಇನ್ನು ನಾಯಕ'' ಎಂದು ಕರೆಸಿಕೊಳ್ಳಲು ಅನೇಕ ಹಂತ ತಲುಪಬೇಕಿರುವ ಕುಮಟಾ ಕಾಂಗ್ರೆಸ್ಸಿನಹೊಸ ಅಭ್ಯರ್ಥಿ” ಪಾಲಿಟಿಕಲ್ ಆರ್ಗನೈಸ್'' ವಿಚಾರವಾಗಿ ವಿರೋಧ ಪಕ್ಷದ ನಾಯಕರಾದ ಸೂರಜ್ ಸೋನಿ ಅವರಿಂದ ಹಾಗೂಪಾಲಿಟಿಕಲ್ ಸ್ಟ್ರಾಟರ್ಜಿ” ವಿಚಾರವಾಗಿ ಹಾಲಿ ಶಾಸಕ ದಿನಕರ ಶೆಟ್ಟಿ ಅವರಿಂದ ಕಲಿಯುವುದು ಬಹಳಷ್ಟಿದೆ ಎನ್ನುವುದನ್ನು ಸ್ವ ಪಕ್ಷದವರೇ ಒಪ್ಪಿಕೊಳ್ಳುತ್ತಾರೆ.

ಪಕ್ಷದೊಳಗೆ ಉಳಿದು ಗುಂಪುಗಾರಿಕೆ ಮಾಡುತ್ತಿರುವ “ಹೊಸ ಅಭ್ಯರ್ಥಿ”ಯ ಎಲ್ಲಾ ಹುದ್ದೆಗಳನ್ನು ಕಸಿದುಕೊಂಡು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಹಳ್ಳಿ ಹಳ್ಳಿ ತಿರುಗಾಡು ಎಂದು ಹೈಕಮಾಂಡ್ ಹೇಳುವುದರ ಜೊತೆಗೆ ಇಲ್ಲಿನ ಹಿರಿಯ, ಪ್ರಾಮಾಣಿಕ ಹಿಂದುಳಿದ ವರ್ಗದ ಕಾರ್ಯಕರ್ತರಿಗೆ ಉತ್ತಮ ಸ್ಥಾನ ನೀಡಿದರೆ ಪಕ್ಷ ಸಂಘಟನೆ ಇನ್ನಷ್ಟು ಗಟ್ಟಿಯಾಗಲು ಸಾಧ್ಯ ಎನ್ನುವುದು ಈ ಕ್ಷೇತ್ರದ ಪ್ರಜ್ಞಾವಂತರ ಅಭಿಪ್ರಾಯ.