ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಿದೆ.


ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಪುತ್ರಿ ಬೀನಾ ವೈದ್ಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯು ಭಟ್ಕಳದ ಮುರುಡೇಶ್ವರದಿಂದ ಮಧ್ಯಾಹ್ನ ಹೊರಟಿತ್ತು. ಸಹಸ್ರಾರು ಸಂಖ್ಯೆಯ ಮಂಕಾಳ ವೈದ್ಯರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ಡಾ.ಅಂಜಲಿ ನಿಂಬಾಳ್ಕರ್ ಅವರ ಅಭಿಮಾನಿಗಳು ಬೀನಾ ವೈದ್ಯ ನೇತೃತ್ವದೊಂದಿಗೆ ಗೇರುಸೊಪ್ಪ ವೃತ್ತಕ್ಕೆ ಆಗಮಿಸಿದರು.
ಇದನ್ನೂ ಓದಿ
- ಕಾರವಾರದಲ್ಲಿ ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರದ ರೆಂಬೆ ಬಿದ್ದು ಬಾಲಕಿಗೆ ಗಾಯ
- ಹಸುವಿನ ಮೇಲೂ ಕಾಮುಕರ ಕಣ್ಣು.! ಕಾಡಶೆಟ್ಟಿಹಳ್ಳಿಯಲ್ಲಿ ಕೃತ್ಯ
- ವಾಹನ ಸವಾರರಿಗೆ ಎಚ್ಚರಿಕೆ.! ಹೆದ್ದಾರಿ ಎರಡೂ ತಿಂಗಳು ಬಂದ್
ಅಲ್ಲಿಂದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಬೀನಾ ವೈದ್ಯರೊಂದಿಗೆ ತೆರೆದ ವಾಹನದಲ್ಲಿ ನಿಂತು ಬೈಕ್ ಸವಾರರೊಂದಿಗೆ ಬಿರು ಬಿಸಿಲಿನಲ್ಲೂ ರ್ಯಾಲಿಯೊಂದಿಗೆ ಕುಮಟಾಕ್ಕೆ ತೆರಳಿದರು. ರಸ್ತೆಯ ಅಕ್ಕಪಕ್ಕದ ಇಕ್ಕೆಲಗಳಲ್ಲಿ ನಿಂತು ನೋಡುತ್ತಿದ್ದ ಜನಕ್ಕೆ ಡಾ.ಅಂಜಲಿ ಹಾಗೂ ಬೀನಾ ವೈದ್ಯ ಕೈಬೀಸಿದರು.
ರ್ಯಾಲಿಯಲ್ಲಿ ಜೈ ಭಜರಂಗಿ ಬಾವುಟ ಎಲ್ಲರ ಗಮನ ಸೆಳೆದರೆ, ಸಹಸ್ರಾರು ಬೈಕ್ಗಳು ಸಾಗರದಂತೆ ಹೆದ್ದಾರಿಯಲ್ಲಿ ಸಾಗುವ ಮೂಲಕ ವಿರೋಧಿ ಪಾಳಯದ ಎದೆಯಲ್ಲಿ ತಳಮಳ ಉಂಟುಮಾಡಿತು.