ಸುದ್ದಿಬಿಂದು ಬ್ಯೂರೋ ವರದಿ
Kumta:ಕುಮಟಾ : ರಾತ್ರಿ 8ಗಂಟೆ ಆದರೆ ಸಾಕು ಇಲ್ಲಿನ Ksrtcಅಧಿಕಾರಿಗಳು ಗಾಡ ನಿದ್ರೆಗೆ ಜಾರುವಂತೆ ಕಾಣುತ್ತಿದ್ದು,ನಿತ್ಯವೂ ನೂರಾರು ಪ್ರಯಾಣಿಕರು ರಸ್ತೆಯಲ್ಲಿ ನಿಲ್ಲುವಂತಾಗಿದೆ.
ಹೌದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ದೇಶ ಹಾಗೂ ವಿದೇಶ ಮಟ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿದೆ. ಆದರೆ ರಾತ್ರಿ 8ಗಂಟೆಯ ಬಳಿಕ ಗೋಕರ್ಣಕ್ಕೆ ಹೋಗಬೇಕು ಅಂತಾ ರಾಜ್ಯ ಹಾಗೂ ದೇಶ-ವಿದೇಶಗಳಿಂದ ಕುಮಟಾ ಬಸ್ ನಿಲ್ದಾಣಕ್ಕೆ ಬರುವ ಪ್ರವಾಸಿಗರು ರಸ್ತೆಯಲ್ಲಿಯೋ ಇಲ್ಲ.ಬಸ್ ನಿಲ್ದಾಣದಲ್ಲೋ ರಾತ್ರಿ ಕಳೆಯಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ಇಲ್ಲಿನ ಅಧಿಕಾರಿಗಳು ಪ್ರಯಾಣಿಕರಿಗೆ ಅನುಕೂಲಕವಾಗಿ ಬಸ್ ಓಡಿಸುವ ಬದಲಿಗೆ ಚಾಲಕ, ನಿರ್ವಾಹಕರಿಗೆ ಅನುಕೂಲಕರವಾಗಿ ಬಸ್ ಓಡಿಸುವಂತೆ ಕಂಡು ಬರುತ್ತಿದೆ.
ರಾತ್ರಿ 8 ಗಂಟೆಯ ಬಳಿಕ ಯಾರಾದ್ರೂ ಗೋಕರ್ಣಕ್ಕೆ,ಇಲ್ಲವೆ ಕಾರವಾರ,ಅಂಕೋಲಾ ಹೋಗಬೇಕು ಅಂದರೆ ಒಂದೇ ಒಂದು ಬಸ್ ವ್ಯವಸ್ಥೆ ಇಲ್ಲ. ಗೋಕರ್ಣ, ಅಂಕೋಲಾ ಭಾಗದಲ್ಲಿ ರಾತ್ರಿ ವೇಳೆ ವಾಸ್ತವ್ಯ ಮಾಡಲಿರುವ ಬಸ್‌ಗಳನ್ನ ಕುಮಟಾ ಬಸ್ ನಿಲ್ದಾಣದಿಂದ ವಿಳಂಬವಾಗಿ ಬಿಡುವ ಬದಲು ಚಾಲಕ,ನಿರ್ವಾಹಕರಿಗೆ ಅನುಕೂಲಕರವಾಗುವಂತೆ 7-8ಗಂಟೆಗೆ ಕುಮಟಾ ಬಸ್ ನಿಲ್ದಾಣದಿಂದ ಬಿಡಲಾಗುತ್ತಿದೆ. ಇದರಿಂದಾಗಿ ರಾತ್ರಿ 8ಗಂಟೆಯ ಬಳಿಕ ಯಾರೆ ಕುಮಟಾ ಬಸ್ ನಿಲ್ದಾಣಕ್ಕೆ ಬಂದರೆ ಗೋಕರ್ಣ,ಅಂಕೋಲಾ, ಸೇರಿದಂತೆ ಗ್ರಾಮೀಣ ಭಾಗಕ್ಕೆ ಹೋಗುವ ಪ್ರಯಾಣಿಕರು ಸಾವಿರಾರೂ ರೂಪಾಯಿ ಹಣ ಕೊಟ್ಟು ಖಾಸಗಿ ವಾಹನ ಮಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ನಿತ್ಯವೂ ಉಂಟಾಗುತ್ತಿದೆ.
ಈ ಬಗ್ಗೆ ಖುದ್ದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಒಂದು ದಿನ 8 ಗಂಟೆಯೊಳಗೆ ಗಾಡ ನಿದ್ರೆಗೆ ಜಾರುವುದನ್ನ ಬಿಟ್ಟು ಕುಮಟಾ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದರೆ. ಗೋಕರ್ಣ,ಅಂಕೋಲಾ,ಭಾಗಕ್ಕೆ ಹೋಗುವ ಪ್ರಯಾಣಿಕರು ಎಷ್ಟಿರಲಿದ್ದಾರೆ ಎನ್ನುವ ಸ್ಪಷ್ಟ ಮಾಹಿತಿ ಗೊತ್ತಾಗಬಹುದಾಗಿದೆ..
ಗಮನಿಸಿ