ಸುದ್ದಿಬಿಂದು ಬ್ಯೂರೋ

ಅಂಕೋಲಾ : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಓರ್ವಳ ಕುತ್ತಿಗೆಯಲ್ಲಿದ್ದ ಮಂಗಳಸೂತ್ರವನ್ನ ಬೈಕ್‌ ನಲ್ಲಿ ಬಂದ ಇಬ್ಬರೂ ಕಳ್ಳರು ದೋಚಿಕೊಂಡು ಹೋಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ನಡೆದೆ.

ಅಂಕೋಲಾ ತಾಲೂಕಿನ ಸೀಬರ್ಡ ಕಾಲೋನಿಯ ನಿವಾಸಿಯಾಗಿರುವ ವಾಸಂತಿ ಚುಡಾಮಣಿ ತಾಂಡೇಲ್‌ ಎಂಬ ಮಹಿಳೆ ಅಂಕೋಲಾದ ಬೆಲೆಕೇರಿಯ ರಸ್ತೆ ಮೂಲಕ ಹಟ್ಟಿಕೇರಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಹಿಳೆಯ ಹಿಂಬದಿಯಿಂದ ಬೈಕ್‌ ಮೇಲೆ ಬಂದ ಕಳ್ಳರು ಆಕೆಯ ಕುತ್ತಿಗೆಯಲ್ಲಿದ್ದ ೨೦ ಗ್ರಾಂ ಆಗುವಷ್ಟು ಎರಡು ಎಳೆಯ ಮಂಗಳಸೂತ್ರವನ್ನ ಹರಿದುಕೊಂಡು ವೇಗವಾಗಿ ಬೈಕ್‌ ಚಲಿಸಿಕೊಂಡು ಪರಾರಿಯಾಗಿದ್ದಾರೆ. ಕಳ್ಳತನವಾಗಿರುವ ಬಂಗಾರದ ಮೌಲ್ಯ ೮೦ ಸಾವಿರ ಎಂದು ಅಂದಾಜಿಸಲಾಗಿದೆ.

ಘಟನೆ ಕುರಿತಾಗಿ ಅಂಕೋಲಾ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಅಂಕೋಲಾ ಪೊಲೀಸರು ಕಳ್ಳರ ಪತ್ತೆಗಾಗಿ ಕಾರ್ಯಚರಣೆ ಮುಂದು ವರೆಸಿದ್ದಾರೆ. ಇತ್ತಿಚೀನ ದಿನದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರು ಆರೋಪಿಗಳನ್ನ ಬಂಧಿಸುತ್ತಿದ್ದರು ಸಹ ಕಳ್ಳತನ ಪ್ರಕರಣಗಳು ಜೋರಾಗಿದ್ದು,