ಸುದ್ದಿಬಿಂದು ಬ್ಯೂರೋ
ಕಾರವಾರ : ಗೋವಾದಿಂದ ಅಕ್ರಮವಾಗಿ ಕರ್ನಾಟಕವನ್ನ ಪ್ರವೇಶಿಸಿದ ಲಕ್ಷಾಂತರ ಮೌಲ್ಯದ ಗೋವಾ ಮದ್ಯವನ್ನ ಪೊಲೀಸರು ವಶಕ್ಕೆ ಪಡೆದು ಇಬ್ಬರೂ ಆರೋಪಿಗಳನ್ನ ಬಂಧಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ಖಾಫ್ರಿ ದೇವಸ್ಥಾನದ ಬಳಿ ನಡೆದಿದೆ.
ಗೋವಾದಿಂದ ಟಾಟಾ ಏಸ್ ಗೂಡ್ಸ್ ವಾಹನಲ್ಲಿ ರಾಜಾರೋಷವಾಗಿ ಯಾವ ಪೊಲೀಸರ ಭಯ-ಭೀತಿ ಇಲ್ಲದೆ ಲಕ್ಷಾಂತರ ರೂಪಾಯಿ ಮೌಲ್ಯದ ಗೋವಾ ಮದ್ಯವನ್ನ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆದಿದ ಕಾರವಾರ ಪೊಲೀಸರು ಇಬ್ಬರೂ ಆರೋಪಿಗಳನ್ನ ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಗೋವಾ ಮದ್ಯವನ್ನ ವಶಕ್ಕೆ ಪಡೆದಿದ್ದು, ಓರ್ವ ಆರೋಪಿ ಪರಾರಿಯಾಗಿದ್ದಾನೆ.
ಮಿಥುನ್ ನಾಯ್ಕ, ಸಂತೋಷ ಠಾಕರಕರ್, ಪ್ರಸಾದ ದೇಸಾಯಿ ಮದ್ಯ ಸಾಗಿಸುತ್ತಿದ್ದ ಆರೋಪಿತರಾಗಿದ್ದಾರೆ. ಬಂಧಿತರಿಂದ 1,18,800 ರೂಪಾಯಿ ಮೌಲ್ಯದ ಗೋವಾ ಮದ್ಯ ಹಾಗೂ ವಾಹನ ವಶಕ್ಕೆ ಪಡೆಯಲಾಗಿದೆ. 75,600 ರೂ ಮೌಲ್ಯದ 504 ಬಾಟಲ್ ಗೋವಾ ಫೆನ್ನಿ, 43,200 ರೂ ಮೌಲ್ಯದ 288 ಬಾಟಲ್ ಗೋವಾ ವಿಸ್ಕಿ ಜಪ್ತು ಮಾಡಲಾಗಿದ್ದು, ಇನ್ನೂ ಮದ್ಯ ಸಾಗಾಟಕ್ಕೆ ಬಳಸಿದ್ದ 2 ಲಕ್ಷ ಮೌಲ್ಯದ ಗೂಡ್ಸ್ ವಾಹನ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.