ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಮನೆಯೊಂದರ ಸಮೀಪದಲ್ಲಿನ ಮಾವಿನ ಮರ ಏರಿ ಭಯಹುಟ್ಟಿಸಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನ ಸೆರೆ ಹಿಡಿದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಡೆದಿದೆ.

ಸುಮಾರು 12ಅಡಿಗಿಂತಲ್ಲೂ ಉದ್ದವಾಗಿದ್ದ ಕಾಳಿಂಗ ಸರ್ಪವೊಂದನ್ನ ಉರಗ ತಜ್ಞ ಅಶೋಕ‌ ನಾಯ್ಕ ಸೆರೆ ಹಿಡಿದಿದ್ದಾರೆ. ಬರ್ಗಿ ಗ್ರಾಮದ ಇಂದಿರಾ ಪಟಗಾರ‌ ಅವರ ಮನೆ ಸಮೀಪದ ಮಾವಿನ ಮರದಲ್ಲಿ ಕಾಳಿಂಗ ಅವಿತುಕೊಂಡಿತ್ತು.ಇದರಿಂದ ಇಂದಿರಾ ಪಟಗಾರ ಕುಟುಂಬಸ್ಥರು ಸೇರಿ ಅವರ ಮನೆಯ ಸುತ್ತಮುತ್ತಲಿನ ಜನ ಭಯ ಭೀತರಾಗಿದ್ದರು. ಮರದಲ್ಲಿದ್ದ ಕಾಳಿಂಗ ಸರ್ಪವನ್ನ ಕಂಡ ತಕ್ಷಣ ಉರಗ ತಜ್ಞ ಅಶೋಕ ನಾಯ್ಕ ಅವರಿಗೆ ತಿಳಿಸಲಾಗಿತ್ತು.

ತಕ್ಷಣ ಸ್ಥಳಕ್ಕೆ ಬಂದ ಅಶೋಕ ನಾಯ್ಕ ಮಾವಿನ ಮರವೇರಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನ ಸೆರೆ ಹಿಡಿದ್ದಾರೆ. ಕಾಳಿಂಗ ಸರ್ಪ ಬಂದಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು..

ಗಮನಿಸಿ