ಸುದ್ದಿಬಿಂದು ಬ್ಯೂರೋ
ಹುಬ್ಬಳ್ಳಿ: ಕೈ ಗಡಿಯಾ ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವೆ ಉಂಟಾದ ಜಗಳ ಚಾಕು ಇರಿದು ಕೊಲೆ‌ ಮಾಡುವ ಮೂಲಕ ಅಂತ್ಯ ಕಂಡ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸ್ಮಾರ್ಟ್ ವಾಚ್ ಗಾಗಿ ಮಂಜುನಾಥ ಹಾಗೂ ಅಸ್ಲಮ್ ನಡುವೆ ಸಣ್ಣ ಜಗಳ ಇತ್ತು ಎನ್ನಲಾಗಿದೆ.ಮಂಗಳವಾರ ರಾತ್ರಿ 8-30 ರ ಸುಮಾರಿಗೆ ಮಂಜುನಾಥ, ಅಸ್ಲಮ್ ಬಳಿ ಬಂದಾಗ ಇಬ್ಬರ ನಡುವೆ ಮಾತಿಗೆ ಮಾತು ನಡೆದಿದೆ. ಇ ವೇಳೆ ಅಲ್ಲೆ‌ ಪಕ್ಕದಲ್ಲಿ ತರಕಾರಿ ಕತ್ತರಿಸಲು ಇಟ್ಟುಕೊಂಡಿದ್ದ ಚಾಕುವಿನಿಂದ ಮಂಜುನಾಥ, ಅಸ್ಲಮ್ ನ ಹೊಟ್ಟೆಗೆ ಇರಿದಿದ್ದಾನೆ. ತಕ್ಷಣ ಅಸ್ಲಮ್ ನನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.‌ಆದ್ರೆ ಅಸ್ಲಮ್ ಆಸ್ಪತ್ರೆಗೆ ತರುವಷ್ಟರಲ್ಲಿ ಮೃತಪಟ್ಟಿದ್ದಾನೆ.

ಕಿಮ್ಸ್ ನಲ್ಲಿ ಹಂತಕ ಅರೆಸ್ಟ್
ಹುಬ್ಬಳ್ಳಿ ನಗರದ ವೆಂಕಟೇಶ್ವರ ಕಾಲನಿಯಲ್ಲಿ ಯುವಕನಿಗೆ ಚಾಕು ಇರಿದ ಆರೋಪಿ, ಏನೂ ಆಗಿಲ್ಲವೇನೋ ಎಂಬಂತೆ ತನಗೆ ಚಿಕಿತ್ಸೆ ಪಡೆದುಕೊಳ್ಳಲು ನೇರವಾಗಿ ಕಿಮ್ಸಗೆ ಬಂದಾಗಲೇ ಪೊಲೀಸರು ಹೆಡಮುರಿಗೆ ಕಟ್ಟಿದ್ದಾರೆ.