ಸುದ್ದಿಬಿಂದು ಬ್ಯೂರೋ
ಯಲ್ಲಾಪುರ:
ಹೊಲದ ಪಕ್ಕದಲ್ಲಿ ಒಣಗಿದ ಮರದ ಪೊಟರೆಯೊಂದರಲ್ಲಿ ವಾಸವಾಗಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನ (king Cobra) ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಅದನ್ನ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಬಿಳಕಿ ಸಮೀಪ್ ಬಸವನಗುಂಡಿ ಸಮೀಪ ನಡೆದಿದೆ.

ಕಳೆದ 15ದಿನಗಳಿಂದ ಮರ ಪೊಟರೆಯೊಂದರಲ್ಲಿ ಈ ಕಾಳಿಂಗ ಸರ್ಪ ವಾಸವಾಗಿದ್ದರಿಂದ ರೈತರು ತಮ್ಮ ಜಮೀನುಗಳಿಗೆ ಹೋಗಲು ಭಯಪಡುವಂತಾಗಿತ್ತು, ಬಳಿಕ ಅರಣ್ಯ ಇಲಾಖೆಗೆ ಈ ವಿಚಾರ ಗೋತ್ತಾಗಿದ್ದು, ಬಳಿಕ ಶಿರಸಿಯ ಉರಗಪ್ರೇಮಿ ಮಾಸೈಯ್ಯದ್ ಅವರನ್ನು ಸ್ಥಳಕ್ಕೆ ಕರೆಸಿ, ಕಾಳಿಂಗ ಸರ್ಪವನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ‌ ಕಾಳಿಂಗ ಸರ್ಪ ಸುಮಾರು 12 ಅಡಿ ಉದ್ದವಿದ್ದು, ಭಾರೀ ಗಾತ್ರವನ್ನ ಹೊಂದಿತ್ತು, ಎಲ್ಲರೂ ಭಯಪಡುವಂತೆ ಮಾಡಿತ್ತು.

ಆರ್‌ಎಫ್‌ಒಗಳಾದ ಅಮಿತ್ ಚೌಹಾಣ, ಶಿಲ್ಪಾ ನಾಯ್ಕ, ಡಿಆರ್‌ಎಫ್‌ಒ ಮಂಜುನಾಥ ಆಗೇರ, ಅರಣ್ಯ ರಕ್ಷಕರಾದ ಗಣೇಶ ಪವಾರ, ವನ್ಯಜೀವಿ ಸಂಶೋಧನಾ ತಂಡದ ರವಿ, ಅಜಿಂಕ್ಯಾ ಕಾರ್ಯಾಚರಣೆಯಲ್ಲಿ ಇದ್ದರು.