ಸುದ್ದಿಬಿಂದು ಬ್ಯೂರೋ
ಕುಮಟ :
ಚಾಲಕನ ನಿಯಂತ್ರಣ ತಪ್ಪಿದ ಕಾರ ಹೆದ್ದಾರಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಪಕ್ಕದಲ್ಲಿರುವ ಕಿರಾಣಿ ಅಂಗಡಿಯೊಳಗೆ ನುಗ್ಗಿ ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಗಾಯಗೊಂಡಿರುವ ಘಟನೆ ನುಶಿಕೋಟೆ ಬಳಿ ನಡೆದಿದೆ.

ಅಪಘಾತದಲ್ಲಿ ಮಧುಕರ (46), ಮಾಣಿಕ್ಯ ಎಂ ಶೇಟ್, (44), ಮೈತ್ರಿ ಎಂ ಶೇಟ್ (19) ಎಂಬುವವರೆ ಗಾಯಗೊಂಡವರಾಗಿದ್ದಾರೆ. ಇವರು ಕುಟುಂಬ ಸಮೇತವಾಗಿ ಮಣಿಪಾಲದಿಂದ ಗೋವಾದಲ್ಲಿರುವ ಶಾಂತಾ ದುರ್ಗಾ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳುತ್ತಿದ್ದರು, ಬೆಳಿಗ್ಗಿನ ಜಾವ ಮಣಿಪಾಲದಿಂದ
ಮಣಿಪಾಲದಿಂದ ಗೋವಾ ಪ್ರಯಾಣಿಸುವಾಗ ಬೆಳಿಗ್ಗೆ ಸುಮಾರು ಆರು ಗಂಟೆ ಸಮಯಕ್ಕೆ ನುಶಿಕೋಟೆ ಬಳಿ ಹೋಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿನ ಡಿವೈಡರ್ ಗೆ ಕಾರು ಡಿಕ್ಕಿಯಾಗಿದೆ.

ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು ನೇರವಾಗಿ ಹೆದ್ದಾರಿ ಪಕ್ಕದಲ್ಲಿ ಇದ್ದ ಸಾಯಿನಾಥ್ ಎಂಬುವವರ ಕಿರಾಣಿ ಅಂಗಡಿಯೊಳಗೆ ನುಗ್ಗಿದ್ದು, ಇವರ ಪಕ್ಕದಲ್ಲಿದ್ದ ಇನ್ನೊಂದು ಅಂಗಡಿಗೂ ಸಹ ಹಾನಿಯಾಗಿದೆ. ಅಪಘಾತದಲ್ಲಿ ಕಾರ ಚಲಿಸುತ್ತಿದ್ದ ಮಯೂರ ಶೇಟ್ ಅವರಿಗೆ ಸಹ ಗಾಯವಾಗಿದೆ. ಅತಿವೇಗದ ಚಾಲನೆ ಈ ಅಪಘಾತಕ್ಕೆ ಕಾರಣವಾಗಿದೆ.

ಇನ್ನೂ ಅಪಘಾತಕ್ಕೆ ಒಳಗಾಗಿದ್ದವರನ್ನ 108ವಾಹನದ ಮೂಲಕ ಕುಮಟ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಬಳಿಕ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.