ಸುದ್ದಿಬಿಂದು ಬ್ಯೂರೋ
ಹೊನ್ನಾವರ
: ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಓರ್ವನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ‌‌, ಪಾದಚಾರಿ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ, ಪಟ್ಟಣದ ಮೂರುಕಟ್ಟೆ ಸಮೀಪ ನಡೆದಿದೆ.

ಹೊನ್ನಾವರ ಕಡೆಯಿಂದ ಬೆಂಗಳೂರಿಗೆ ಚಲಿಸುತ್ತಿದ್ದ ಸಿಬರ್ಡ್ ಬಸ್ ಚಾಲಕ ಅತೀ ವೇಗವಾಗಿ ತನ್ನ ಬಸ್ ಚಲಾಯಿಸಿಕೊಂಡು ಬರುತ್ತಿದ್ದ ಎನ್ನಲಾಗಿದೆ. ಅದೆ ವೇಳೆ ಪಾದಚಾರಿ ಓರ್ವ ಹೆದ್ದಾರಿಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಹೆದ್ದಾರಿ ದಾಟುವ ವೇಳೆ ಅತಿವೇಗವಾಗಿ ಬಂದ ಖಾಸಗಿ ಬಸ್ ಚಾಲಕ ನೇರವಾಗಿ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಬಸ್ ತುಂಬಾನೆ ವೇಗವಾಗಿ ಚಲಿಸುತ್ತಿರುವುದರಿಂದ ಚಾಲಕನಿಂದ ಪಾದಚಾರಿಯನ್ನ ತಪ್ಪಿಸಲು ಆಗದೆ ನೇರವಾಗಿ ಆತನಿಗೆ ಬಸ್ ಗುದ್ದಿದ್ದಾನೆ.

ಇದರಿಂದಾಗಿ ಅಪರಿಚಿತ ಪಾದಚಾರಿ ತಲೆಗೆ ಗಂಭೀರವಾಗಿ ಗಾಯಗೊಂಡು ಆತ ಸ್ಥಳದಲ್ಲೆ ಕೊನೆಯುಸಿರೆಳೆದಿದ್ದಾನೆ. ಇನ್ನೂ ಅಪಘಾತಕ್ಕೆ ಕಾರಣವಾಗಿರುವ ಸಿಬರ್ಡ್ ಬಸ್ ಚಾಲಕ ಸ್ಥಳದಲ್ಲೆ ಬಸ್ ಬಿಟ್ಟು ಪರಾರಿಯಾಗಿದ್ದು. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಪೊಲೀಸರು ತನಿಖೆ ಕೈಕೊಂಡಿದ್ದಾರೆ.ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.