ಸುದ್ದಿಬಿಂದು
ಮಧ್ಯಪ್ರದೇಶ
: ದೇವಾಲಯದ ಸಿಬ್ಬಂದಿಗಳಿಬ್ಬರು ಸೇರಿಕೊಂಡು ಅಪ್ರಾಪ್ತ ಬಾಲಕಿಯ(minor girl)ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ ದೇಹವನ್ನ ಕ್ರೂರವಾಗಿ ಕಚ್ಚಿ ವಿಕೃತ ಮರೆದಿರುವ ಘಟನೆ ಮಧ್ಯಪ್ರದೇಶ ಸತ್ನಾ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ರವೀಂದ್ರ ಕುಮಾರ್ ರವಿ ಮತ್ತು ಅತುಲ್ ಭಡೋಲಿಯಾ ಎಂದು ಕೃತ್ಯ ಎಸೆಗಿದವರಾಗಿದ್ದಾರೆ.ಆರೋಪಿಗಳು ಸತ್ನಾ ಮೈಹಾರ್ ಪಟ್ಟಣದಲ್ಲಿರುವ ಪ್ರಸಿದ್ದ ಶಾರದಾ ದೇವಾಲಯದ ನಿರ್ವಹಣಾ ಸಮಿತಿಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳಿಬ್ಬರು 12ವರ್ಷದ ಬಾಲಕಿಯ ಮೇಲೆ ಅತ್ಯಾಚಾರ(rape of minor girl,)ಮಾಡಿದ್ದಲ್ಲದೇ ಅನೇಕ ಬಾರಿ ಆಕೆಯ ಖಾಸಗಿ ಭಾಗಕ್ಕೆ ಕಚ್ಚಿ ಮತ್ತು ಭೀಕರವಾಗಿ ಕೃತ್ಯ ಎಸೆಗಿದ್ದಾರೆ ಎಂದು ಪೊಲೀಸ ಮೂಲಗಳಿಂದ ತಿಳಿದು ಬಂದಿದೆ.

ಬಾಲಕಿಗೆ ತೀವ್ರ ರಕ್ತಸ್ರಾವವಾಗಿತ್ತು ಮತ್ತು ವೈದ್ಯರು ಆಕೆಯ ಆರೋಗ್ಯದ ಮೇಲೆ ನಿಗಾ ಇಡುತ್ತಿದ್ದಾರೆ ಎಂದು ಸತ್ನಾ ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಗುಪ್ತಾ ಮಾಧ್ಯಮಕ್ಕೆ ತಿಳಿಸಿದ್ದಾರೆ. ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.